(ನ್ಯೂಸ್ ಕಡಬ) newskadaba.com ಕಡಬ, ಆ.02. ಇಲ್ಲಿನ ಸಿ.ಎ. ಬ್ಯಾಂಕಿನ ಯೋಗಕ್ಷೇಮ ಸಂಕೀರ್ಣದಲ್ಲಿ ಏರ್ ಟೆಲ್ ಸೇವಾ ಕೇಂದ್ರದ ಕಡಬ ಶಾಖೆ, ಭಾಗ್ಯಲಕ್ಷ್ಮೀ ಕಮ್ಯುನಿಕೇಶನ್ ಶನಿವಾರದಂದು ಶುಭಾರಂಭಗೊಂಡಿತು.
ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಯವರು ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಏರ್ಟೆಲ್ ಮಂಗಳೂರು ವಲಯ ವ್ಯವಹಾರ ಮುಖ್ಯಸ್ಥ ಸದಾನಂದ ಎಂ, ವಲಯ ಮಾರಾಟ ಅಧಿಕಾರಿ ಶರತ್ ಕೆ.ಎಸ್. ಏರಿಯ ಮ್ಯಾನೆಜರ್ ಮನೋಜ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ರವಿರಾಜ್ ಶೆಟ್ಟಿ, ಚೆನ್ನಪ್ಪ ಗೌಡ, ಶ್ರುತಿ ಜಯಂತ್, ಕುಸುಮಾಧರ ಗೌಡ ಕೋಡಿಂಬಾಳ, ಮೋನಪ್ಪ ಗೌಡ ಕೋಡಿಂಬಾಳ, ರಾಧಾಕೃಷ್ಣ ಭಾಗ್ಯಲಕ್ಷ್ಮೀ, ಪ್ರದೀಪ್ ಕೋಲ್ಪೆ, ಜಯರಾಮ ಆರ್ತಿಲ, ಮೋಹನ ಕೋಡಿಂಬಾಳ, ನಾಗೇಶ್ ಕೋಡಿಂಬಾಳ, ರಘುಚಂದ್ರ ಕೊಣಾಜೆ, ಸುಜಿತ್ ಪಿ.ಕೆ, ನಿತಿನ್ ಕಡಬ, ರಾಜೇಶ್ ಕೋಡಿಂಬಾಳ, ಅಶ್ವಥ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಜಯಂತ್ ಕೋಡಿಂಬಾಳ ಅವರು ಅತಿಥಿಗಳನ್ನು ಸ್ವಾಗತಿಸಿದರು.
ನೂತನವಾಗಿ ಪ್ರಾರಂಭಗೊಂಡಿರುವ ಏರ್ ಟೆಲ್ ಸೇವಾ ಕೇಂದ್ರದಲ್ಲಿ ಏರ್ ಟೆಲ್ ಸಂಬಂಧಿತ ಸೇವೆಗಳು ಲಭ್ಯವಾಗಲಿದ್ದು, ಏರ್ ಟೆಲ್ ಹೊಸ ಸಿಮ್ ಕಾರ್ಡ್, ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಬೇರೆ ನೆಟ್ ವರ್ಕ್ ನಿಂದ ಪೋರ್ಟೆಬಿಲಿಟಿ, ಏರ್ ಟೆಲ್ ಡಿಟಿಎಚ್ ಸೇಲ್ಸ್ & ಸರ್ವೀಸಸ್, ಫಾಸ್ಟ್ ಟ್ಯಾಗ್, ಹೀರೋ, ಬಜಾಜ್ ಮೊದಲಾದ ಫೈನಾನ್ಸ್ ಗಳ ಇಎಂಐ ಪಾವತಿ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ. ಮಾನ್ಸೂನ್ ಧಮಾಕ ಆಫರ್ ನೀಡಲಾಗಿದ್ದು, ಏರ್ ಟೆಲ್ ಅನ್ ಲಿಮಿಟೆಡ್ ನೆಟ್ ವರ್ಕ್ ಗೆ ಉಚಿತವಾಗಿ ಸೇರಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಏರ್ ಟೆಲ್ ಸೇರುವ ಮೂಲಕ ಅನ್ಲಿಮಿಟೆಡ್ ಹಲೋಟ್ಯೂನ್, ವಿಂಕ್ ಮ್ಯೂಸಿಕ್ ಮತ್ತು ಪ್ರೀಮಿಯಂ ಎಕ್ಸಿಟ್ರೀಮ್ ಕಂಟೆಂಟ್ ಗಳು ಲಭ್ಯವಾಗಲಿದೆ.
ಹಣ ವರ್ಗಾವಣೆ ಮತ್ತು ಹಿಂತೆಗೆತ, ಇನ್ಸೂರೆನ್ಸ್ ಸೌಲಭ್ಯ (ದ್ವಿಚಕ್ರ, ಕೊರೋನಾ ವಿಮೆ, ಹಾಸ್ಪಿಕ್ಯಾಶ್), ಆರೋಗ್ಯ ಇನ್ಸೂರೆನ್ಸ್ ಸೌಲಭ್ಯ (ಡೆಂಗ್ಯೂ ಮಲೇರಿಯಾ), ವಿಮಾ ಪ್ರೀಮಿಯಂ ರೂ.129/-ರೂ 10000 ತನಕ ಕ್ಲೈಮ್, ಕೊರೋನಾ ಪಾಲಿಸಿ ರೂ.499/-ರೂ.25000 ತನಕ ಕ್ಲೈಮ್, ಅಪಘಾತ ವಿಮೆ ಮತ್ತು ಜೀವವಿಮೆ, ವಿಮಾ ಪ್ರೀಮಿಯಂ ರೂ.215 ರೂ 1.00.000 ತನಕ ಕ್ಲೈಮ್(1 ವರ್ಷ ಅವಧಿ), ಸಾಲ ಮರುಪಾವತಿ(ಬಜಾಜ್, ಹೀರೋ ಪಿನ್ ಕಾರ್ಪ್, ಐಸಿಐಸಿಐ, ಎಲ್.ಐ.ಸಿ ಇತ್ಯಾದಿ) ಕೇವಲ ಆಧಾರ್ ಸಂಖ್ಯೆಯನ್ನು ನೀಡಿದರೆ ಮೊಬೈಲ್ ನಂಬರನ್ನು ಬ್ಯಾಂಕ್ ಖಾತೆಯ ಲಿಂಕ್ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9980176283 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.