ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು: ಪ್ರತಿಭಾವಂತ ವಿದ್ಯಾರ್ಥಿ ಪೂರ್ಣಾನಂದನಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಚಂಚಲ ಮನಸ್ಸಿನ ಕಾಲಘಟ್ಟದಲ್ಲಿ ಕಾಲೇಜು ಜೀವನ ಆರಂಭವಾಗುತ್ತದೆ. ಈ ಸಮಯದಲ್ಲಿ ಮನಸ್ಸುನ್ನು ಹಿಡತದಲ್ಲಿಟ್ಟುಕೊಳ್ಳುವ ದೃಡ ಮನಸ್ಸು ಪ್ರತಿಯೊಬ್ಬರಲ್ಲಿ ಇರಬೇಕು. ಉತ್ತಮ ಕನಸ್ಸನ್ನು ನನಸಾಗಿಸುವ ಕಾಲೇಜು ಜೀವನದ ಆರಂಭದಲ್ಲಿ ಎಡವಿದರೆ ಭವಿಷ್ಯದಲ್ಲಿ ಕಷ್ಟಗಳು ಎದುರಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಕಾರ್ಯ ಪೋಷಕರಿಂದ ಶಿಕ್ಷಣ ಸಂಸ್ಥೆಯಿಂದ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹೇಳಿದರು.

ಅವರು ಶ್ರೀ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನಲ್ಲಿ ಬುಧವಾರ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಬಹಲಷ್ಟು ವ್ಯತ್ಯಾಸವಿದೆ. ಅಧುನಿಕತೆಯೊಂದಿಗಿನ ಶಿಕ್ಷಣ ಪದ್ದತಿಯಲ್ಲಿ ಸುಸಂಸ್ಕೃತ ಜೀವನ ಪದ್ದತಿಯನ್ನು ಉದ್ದೀಪನಗೊಳಿಸುವ ಶಿಕ್ಷಣ ಪ್ರಸಕ್ತ ಕಾಲಘಟ್ಟದಲ್ಲಿ ಅಗತ್ಯವಿದೆ. ಶಿಕ್ಷಣದೊಂದಿಗೆ ಪಠೈತರ ಚಟುವಟಿಕಗೆಳಲ್ಲಿ ಭಾಗವಹಿಸಿ ಬೌಧ್ದಿಕ ಹಾಗೂ ಶಾರಿರೀಕ ಶಕ್ತಿಯನ್ನು ಉದ್ದೀಪನಗೊಳಿಸಿ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು. ನಿವೃತ್ತ ಉಪನ್ಯಾಸಕ ವಿ .ಬಿ ಅರ್ತಿಕಜೆ ಮಾತನಾಡಿ, ನೌಕರಿ ಗಳಿಕೆಯ ಮಾನದಂಡವಾಗಿ ಶಿಕ್ಷಣ ಪಡೆಯಬಾರದು . ಬೌಧ್ದಿಕ , ಜ್ಞಾನರ್ಜನೆಯನ್ನು ಗಳಿಸುವ ಶಿಕ್ಷಣದಿಂದ ಜೀವನದಲ್ಲಿ ಹಂತ ಹಂತವಾಗಿ ಯಶಸ್ಸು ಗಳಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಯಾವೂದು ಸರಿ ತಪ್ಪು ಎಂದು ತಿಳಿದುಕೊಂಡು ಮುನ್ನಡೆದಾಗ ಉತ್ತಮ ಭವಿಷ್ಯವಿದೆ ಎಂದರು.

Also Read  ನಿಮ್ಹಾನ್ಸ್ ಸಂಸ್ಥೆ ದೇಶಕ್ಕೆ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪುರ್ಣಾನಂದ ಅವರ ತಾಯಿ ಸವಿತಾ ಉಪಾದ್ಯಾಯ ಮಾತನಾಡಿ ಶುಭಹಾರೈಸಿದರು. ಪದವಿ ಪುರ್ವ ಕಾಲೇಜಿನ ಪ್ರಾಂಶುಪಾಲ ಎಂ ಸತೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಗೊಂಡ ಎಸ್ ಎಸ್ ಎಲ್ ಸಿಯಲ್ಲಿ 625 ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಪುಣಾನಂದ ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಇ ಕೃಷ್ಣಮೂರ್ತಿ, ಕಾರ್ಯದರ್ಶಿ ರಾಧಕೃಷ್ಣ ಕುವೆಚ್ಚಾರು, ಸದಸ್ಯರಾದ ಲಿಂಗಪ್ಪ ಗೌಡ ಕಡೆಂಬ್ಯಾಲು, ಲಕ್ಷ್ಮೀನಾರಯಣ ರಾವ್ ಆತೂರು, ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್, ನಿರ್ದೇಶಕ ವೇದವ್ಯಾಸ ರಾಮಕುಂಜ, ಕನ್ನಡ ಪ್ರೌಢಶಾಲಾ ವಿಭಾಗದ ಮುಖ್ಯಗುರು ಸತೀಶ್ ಭಟ್ ಬಿಳಿನೆಲೆ , ಸಿಸ್ಕೋ ಸಂಸ್ಥೆಯ ಮಂಜು ಶಂಕರ್ , ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಉಪನ್ಯಾಸಕ ವಸಂತ ಕುಮಾರ್ ಕಾಲೇಜಿನ ಉಪನ್ಯಾಸಕರನ್ನು ಪರಿಚಯಿಸಿದರು. ಉಪನ್ಯಾಸಕ ಸತೀಶ್ ಬಲ್ಯ ಕಾಲೇಜಿನ ನೀತಿ ನಿಯಮವಾಳಿಗಳು, ಸವಲತ್ತುಗಳ ವಿವಿರ ನೀಡಿದರು. ಉಪನ್ಯಾಸಕ ಗಣರಾಜ ಕುಂಬ್ಲೆ ಸ್ವಾಗತಿಸಿದರು. ಉಪನ್ಯಾಸಕಿ ಅಶ್ವಿತಾ ರೈ ವಂದಿಸಿದರು. ಉಪನ್ಯಾಸಕ ಹರಿನಾರಯಣ ಆಚಾರ್ ನಿರೂಪಿಸಿದರು.

error: Content is protected !!
Scroll to Top