ಇನ್​ಸ್ಟಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ಅಪ್​ಲೋಡ್ ➤ ಉಡುಪಿ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ವೆಬ್ ಲಿಂಕ್ ಮಾಹಿತಿ ಆಧರಿಸಿ ಉಡುಪಿಯಲ್ಲಿದ್ದ ಸೌರಭ್ ಶೆಟ್ಟಿಯನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಆರೋಪಿ ಆನ್‌ಲೈನ್ ಸ್ಟೋರೇಜ್​ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.ಬಂಧಿತ ಸೌರವ್ ಶೆಟ್ಟಿಯ ಬಗ್ಗೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಕರ್ನಾಟಕದ ಸಿಐಡಿ‌ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಅದರಂತೆ ಸಿಐಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.

 

 

ನಂತರ ಯಾವ ಯಾವ ವೆಬ್​ಸೈಟ್​ಗಳಿಗೆ ಲಿಂಕ್ ಪೋಸ್ಟ್ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಈ ವೇಳೆ ಅಧಿಕಾರಿಗಳಿಗೆ ಆರೋಪಿ ಇನ್​ಸ್ಟಾಗ್ರಾಂ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸಿ ಬ್ಲಾಕ್​ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ ಎಂಬುದು ಗೊತ್ತಾಗಿತ್ತು.ವೆಬ್ ಲಿಂಕ್ ಮಾಹಿತಿ ಆಧರಿಸಿ ಉಡುಪಿಯಲ್ಲಿದ್ದ ಸೌರಭ್ ಶೆಟ್ಟಿಯನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಆರೋಪಿ ಆನ್‌ಲೈನ್ ಸ್ಟೋರೇಜ್​ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅದರಂತೆ ಅಶ್ಲೀಲ ವಿಡಿಯೋ ಸಂಗ್ರಹಿಸಿಟ್ಟಿದ್ದ ಡಿಜಿಟಲ್ ಉಪಕರಣಗಳು, ಕ್ಲೌಡ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಅನ್ಯ ರಾಜ್ಯಗಳ ವ್ಯಕ್ತಿಗಳು ಸಾಕಷ್ಟು ಜನರು ಭಾಗಿಯಾಗಿರುವ ಮಾಹಿತಿ ಸಹ ವಿಚಾರಣೆ ವೇಳೆ ಬಯಲಾಗಿದೆ. ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಮಾಡುತ್ತಿದ್ದ ಗ್ಯಾಂಗ್​ನ ಪ್ರಮುಖ ಸದಸ್ಯ ಸಿಕ್ಕಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Also Read  ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ

 

error: Content is protected !!
Scroll to Top