ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ಸೋನು ಸೂದ್..!

(ನ್ಯೂಸ್ ಕಡಬ) newskadaba.com ಹೈದರಾಬಾದ್,ಜು.28: ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ  ನಟ. ಕೊರೋನಾ ಲಾಕ್ಡೌನ್ ಕಾರಣದಿಂದ ಹೈದರಾಬಾದ್ನ ಟೆಕ್ಕಿ ಉಂಡಾಡಿ ಶಾರದಾ ಕೆಲಸ ಕಳೆದುಕೊಂಡಿದ್ದರು.

 

 

ಉದ್ಯೋಗ ಕಳೆದುಕೊಂಡರೂ ಇಡೀ ಕುಟುಂಬವನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಈ ಮಹಿಳೆಯ ಮೇಲಿತ್ತು. ಹೀಗಾಗಿ ಹೈದರಾಬಾದ್ನ ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕ ಮಹಿಳೆಯ ಕಷ್ಟವನ್ನು ಸೋನು ಸೂದ್ ಮುಂದೆ ತೆರೆದಿಟ್ಟಿದ್ದರು. ಅಲ್ಲದೆ ವ್ಯಕ್ತಿಯೊಬ್ಬರು ನೀವು ಇವರ ಕುಟುಂಬದವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ ಟ್ವೀಟ್ಗೆ ಇಂದು ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ. ನನ್ನ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದು, ಹಾಗೆಯೇ ಟೆಕ್ಕಿಯ ಸಂದರ್ಶನ ಕೂಡ ಮುಗಿಸಿದ್ದಾರೆ. ಅಲ್ಲದೆ ಈಗಾಗಲೇ ಆಕೆಗೆ ಉದ್ಯೋಗದ ಪತ್ರವನ್ನು ಕಳುಹಿಸಲಾಗಿದೆ ಎಂದು ಸೋನು ಸೂದ್ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಶಾರದಾ, ನನಗೆ ಸೋನು ಸೂದ್ ಎಲ್ಲರಿಗೂ ಸಹಾಯ ಮಾಡುತ್ತಿರುವ ವಿಷಯ ಗೊತ್ತಿತ್ತು. ಆದರೆ ನನಗೂ ಕೂಡ ಕರೆ ಬಂದಾಗ ಆಶ್ಚರ್ಯದೊಂದಿಗೆ ಸಂತೋಷವಾಯಿತು ಎಂದಿದ್ದಾರೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಿನ ಹಸ್ತ ಚಾಚುತ್ತಿರುವ ಸೋನು ಸೂದ್ ತಮ್ಮ ಮಾನವೀಯ ಕಾರ್ಯವನ್ನು ಮುಂದುವರೆಸಿ ಇತರೆ ಸೆಲೆಬ್ರಿಟಿಗಳಿಗೆ ಮಾದರಿಯಾಗಿ ನಿಂತಿದ್ದಾರೆ.

Also Read  ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್..!

 

 

 

error: Content is protected !!
Scroll to Top