ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟ ➤ ಇಂದು 5,536 ಜನರಿಗೆ ಕೊರೋನಾ, 102 ಸೋಂಕಿತರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ರಾಜ್ಯದಲ್ಲಿ ಇಂದು ಕೂಡ ಕೊರೋನಾ ರಣಕೇಕೆ ಮುಂದುವರೆದಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 5,536 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,07001ಕ್ಕೆ ಏರಿಕೆಯಾಗಿದೆ. ಅಲ್ಲದೇ ಕಿಲ್ಲರ್ ಕೊರೋನಾಗೆ ಇಂದು 102 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 2,055ಕ್ಕೆ ಏರಿಕೆಯಾಗಿದೆ.

 

 

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರ – 1898, ಬಳ್ಳಾರಿ – 452, ಕಲಬುರ್ಗಿ – 283, ಬೆಳಗಾವಿ – 228, ಮೈಸೂರು – 220, ತುಮಕೂರು – 207, ಕೋಲಾರ – 174, ದಕ್ಷಿಣ ಕನ್ನಡ ಮತ್ತು ಧಾರವಾಡ – 173, ವಿಜಯಪುರ – 153, ಕೊಪ್ಪಳ – 144, ದಾವಣಗೆರೆ – 135, ಬಾಗಲಕೋಟೆ – 115, ಉಡುಪಿ – 109, ಹಾಸನ – 108, ಬೆಂಗಳೂರು ಗ್ರಾಮಾಂತರ – 107, ರಾಮನಗರ – 101, ಮಂಡ್ಯ – 96, ರಾಯಚೂರು – 93, ಗದಗ – 73, ಚಿಕ್ಕಬಳ್ಳಾಪುರ – 72, ಯಾದಗಿರಿ – 67, ಚಿತ್ರದುರ್ಗ – 66, ಚಿಕ್ಕಮಗಳೂರು – 55, ಶಿವಮೊಗ್ಗ – 54, ಚಾಮರಾಜನಗರ – 52, ಉತ್ತರ ಕನ್ನಡ – 47, ಹಾವೇರಿ – 40, ಬೀದರ್ – 39 ಮತ್ತು ಕೊಡಗು – 02 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಇಂದು 5,536 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟು, ಸೋಂಕಿತರ ಸಂಖ್ಯೆ 1,07001ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ ಸೋಂಕಿತರಾದಂತ 40,504 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Also Read  ➤ ಶಿವಮೊಗ್ಗದಲ್ಲಿ ಇಂದು ಪ್ರಧಾನಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆ

 

 

error: Content is protected !!
Scroll to Top