ಚಿನ್ನ, ಬೆಳ್ಳಿ ದರದಲ್ಲಿ ಐತಿಹಾಸಿಕ ಏರಿಕೆ ➤ ಗಗನಕ್ಕೇರಿದ ಆಭರಣಗಳ ದರ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.28:  ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಲೇ ಇದೆ. ಕೆಜಿ ಬೆಳ್ಳಿಗೆ ಒಂದೇ ದಿನ 3490 ರೂಪಾಯಿ ಏರಿಕೆ ಕಂಡಿದ್ದು, ಬೆಳ್ಳಿ ದರ 64,700 ರೂಪಾಯಿ ಆಗಿದೆ. ಚಿನ್ನ ಖರೀದಿ ಮಾಡಬೇಕು ಎಂದು ಪ್ಲಾನ್​ ಹಾಕಿಕೊಂಡವರು ಕಂಗಾಲಾಗಿದ್ದಾರೆ.ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೀಗಾಗಿ, ಬೇರೆ ದಾರಿ ಕಾಣದೆ, ಚಿನ್ನದ ಖರೀದಿಗೆ ಜನರು ಮುಂದಾಗುತ್ತಿಲ್ಲ.

 

 

 

ಲಾಕ್​ಡೌನ್​ ಪೂರ್ಣಗೊಳ್ಳುತ್ತಿದ್ದಂತೆ ಚಿನ್ನದ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಜಿಗಿತ ಕಂಡಿದೆ. ಸೋಮವಾರ ಆಭರಣ ಚಿನ್ನ 10 ಗ್ರಾಂ ಚಿನ್ನಕ್ಕೆ 650 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 49,070 ರೂಪಾಯಿ ಆಗಿದೆ.ಶುದ್ಧ ಚಿನ್ನ 10 ಗ್ರಾಂ ಚಿನ್ನ 740 ರೂಪಾಯಿ ಏರಿಕೆ ಕಂಡಿದ್ದು, 53,530 ರೂಪಾಯಿ ಆಗಿದೆ.ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಲೇ ಇದೆ.ಕೆಜಿ ಬೆಳ್ಳಿಗೆ ಒಂದೇ ದಿನ 3490ರೂಪಾಯಿ ಏರಿಕೆ ಕಂಡಿದ್ದು, ಬೆಳ್ಳಿ ದರ 64,700 ರೂಪಾಯಿ ಆಗಿದೆ.ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

Also Read  ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.!   ➤ ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ಡಿಎ ಹೆಚ್ಚಳ!

error: Content is protected !!
Scroll to Top