ಬಡ ರೈತನಿಗೆ ಟ್ರ್ಯಾಕ್ಟರ್ ನೀಡಿ ಮಾನವೀಯತೆ ಮೆರೆದ ನಟ ಸೋನು ಸೂದ್​​

(ನ್ಯೂಸ್ ಕಡಬ) newskadaba.com ಜು.27:  ಸೋನು ಸೂದ್​ ಸಿನಿಮಾದಲ್ಲಿ ವಿಲನ್​ ಆದರೂ ನಿಜ ಜೀವನದಲ್ಲಿ ಮಾತ್ರ ಹಲವರ ಪಾಲಿಗೆ ಹೀರೋ. ಇವರ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.ಇತ್ತೀಚೆಗೆ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರನ್ನು ತಮ್ಮ ತವರಿಗೆ ತಲುಪಿಸುವ ಕಾರ್ಯ ಸೋನು ಸೂದ್​​ ಮಾಡಿದ್ದರು.

 

ಹಾಗೆಯೇ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಹಲವರಿಗೆ ಉದ್ಯೋಗ ನೀಡಿ ಮಾನವೀಯತೆ ಮೆರೆದರು. ಸಹಾಯ ಬೇಡಿದ ನಿರ್ಗತಿಕರಿಗೆ ಹಣಕಾಸಿನ ನೆರವು ನೀಡಿದ್ದರು ಸೋನು ಸೂದ್​.ಈಗ ಒಂದೆಜ್ಜೆ ಮುಂದೋಗಿ ಆಂಧ್ರಪ್ರದೇಶದ ರೈತರೊಬ್ಬರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ಧಾರೆ. ಎತ್ತುಗಳಿಲ್ಲದೆ ತಾವೇ ಎತ್ತುಗಳಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.ವಿಡಿಯೋ ನೋಡಿದ ಕೂಡಲೇ ಸೋನು ಸೂದ್​ ಎತ್ತುಗಳಿಲ್ಲದೇ ಉಳುಮೆ ಮಾಡಿತ್ತಿದ್ದವರಿಗೆ ಒಂದು ಟ್ರ್ಯಾಕ್ಟರ್ ಅನ್ನೇ ನೀಡಿದ್ದಾರೆ. ಆಂಧ್ರ ಪ್ರದೇಶದ ಚಿತ್ತೋರ್ ಜಿಲ್ಲೆಯ ಮದನಪಲ್ಲಿಯ ರೈತರಿಗೆ ಟ್ರ್ಯಾಕ್ಟರ್ ಕಳಿಸಿಕೊಟ್ಟು ಮಾನವೀಯತೆ ತೋರಿದ್ಧಾರೆ.

Also Read  ಕಾಡಾನೆ ದಾಳಿ- ಅಪಾರ ಕೃಷಿ ನಾಶ

 

 

 

 

error: Content is protected !!
Scroll to Top