ಕೊಂಬಾರು ಸಿ.ಆರ್.ಸಿ. ಕಾಲೋನಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ನಿಗಮದ ಕಛೇರಿ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಕರ್ನಾಟಕ ಅರಣ್ಯ ಅಭಿವೃದ್ದಿ ವಿಭಾಗದ ಸುಬ್ರಹ್ಮಣ್ಯ ರಬ್ಬರ್ ನಿಗಮದ ಮೂಜೂರು ಘಟಕ ವ್ಯಾಪ್ತಿಯ ಕೊಂಬಾರು 16 ಸಿ.ಆರ್.ಸಿ.ಯ ಕಾರ್ಮಿಕರು ಕುಡಿಯುವ ನೀರಿನ ಸಮಸ್ಯೆಯಲ್ಲಿದ್ದು, ವಾರದೊಳಗೆ ನಿಗಮವು ಸರಿಯಾಗಿ ನೀರು ಪುರೈಕೆ ಮಾಡದಿದ್ದಲ್ಲಿ ನಿಗಮದ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಬ್ಬರ್ ಕಾರ್ಮಿಕರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಅವರು ಕಾಲೋನಿಯ ಟ್ಯಾಂಕಿಯ ಎದುರು ಸಭೆ ಸೇರಿ ಕಳೆದ ಐದು ತಿಂಗಳಿಂದ ಕುಡಿಯುವ ನೀರಿನ ತೊಂದರೆ ಅನುಭವಿಸಿದ್ದೆವೆ. ಕೊಂಬಾರು ಗ್ರಾ.ಪಂ.ನಿಂದ ದಿನಕ್ಕೆ ಸ್ವಲ್ಪ ನೀರು ಬರುತ್ತಿದ್ದು ಅದರಿಂದ ಜೀವನ ನಡೆಸುತ್ತಿದ್ದೆವೆ. ನೀರಿನ ಸಮಸ್ಯೆಯ ಬಗ್ಗೆ ನಿಗಮದ ಅಧಿಕಾರಿಗಳಿಗೆ ಹಾಗೂ ಜೆ.ಎಮ್.ಡಿ.ಯವರಿಗೂ ಮೌಖಿಕ ದೂರು ನೀಡಿದ್ದೆವೆ ಆದರೂ ಪ್ರಯೋಜನವಾಗಿಲ್ಲ, ನಮ್ಮ ಕಾಲೋನಿಯಲ್ಲಿ 32 ಮನೆಗಳಿದ್ದು ಸುಮಾರು 150 ಮಂದಿ ಇದ್ದೆವೆ ನಮಗೆ ಕೂಡಲೇ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಯುನೈಟೆಡ್ ಪ್ಲಾಂಟೆಷನ್ ವರ್ಕರ್ಸ್‌ ಯೂನಿಯನ್ನ ಕಾರ್ಯದರ್ಶಿ ಸೆಲ್ವ ಕುಮಾರ್ ಮಾತನಾಡಿ, ನಮ್ಮ ಕಾಲೋನಿಯಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ನಾಗಬನ ಎಂಬಲ್ಲಿಂದ ಪ್ರಕೃತಿದತ್ತವಾದ ಝರಿಯ ನೀರು ಬರುತ್ತಿತ್ತು ಆದರೆ ಅದು ಕಳೆದ ಐದು ತಿಂಗಳಿಂದ ಬರುತ್ತಿಲ್ಲ, ನಾಗಬನ ಎಂಬಲ್ಲಿ ನೀರು ಶೇಖರಿಸಲು ದುರಸ್ತಿ ಕಾರ್ಯ ನಡೆಸಬೇಕು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆವೆ, ಈ ಕಾಮಗಾರಿಗೆ ಹಣ ಕೂಡ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಸಮಸ್ಯೆ ಏನೆ ಇದ್ದರೂ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕಾರ್ಮಿಕರಿಗೆ ಕುಡಿಯುವ ನೀರು ಒದಗಿಸುವುದು ನಿಗಮದ ಜವಾಬ್ದಾರಿ ಕೂಡ ಆಗಿದೆ ಎಂದು ಹೇಳಿದ ಅವರು ಅಧಿಕಾರಿಗಳಿಗೆ ದೂರು ನೀಡಿದ್ದೆವೆ, ಆದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಕೂಡಲೇ ನಮ್ಮ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು, ಒಂದು ವಾರದೊಳಗೆ ಪರಿಹರಿಸದಿದ್ದಲ್ಲಿ ಕಾಲೋನಿಯ ಎಲ್ಲ ಸದಸ್ಯರು ಕಡಬದಲ್ಲಿರುವ ನಿಗಮದ ಕಛೇರಿಯ ಎದುರು ಪ್ರತಿಭಟನೆ ನಡೆಸಲಿದ್ದೆವೆ ಎಂದು ಸೆಲ್ವ ಕುಮಾರು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಭಾಕರ, ಸೆಂದಿಲ್ಕುಮಾರ್, ಬಾಲಕೃಷ್ಣ, ಪದ್ಮಿನಿ, ನಿರ್ಮಲ, ಮಲ್ಲಿಕಾ, ಪುಷ್ಪಾ, ವಲ್ಲಿಯಮ್ಮ, ತಮಿಳು ಸೆಲ್ವಿ, ಕಮಲ, ಗ್ರೇಸಿ ಮೊದಲಾದವರು ಉಪಸ್ಥಿತರಿದ್ದರು.

Also Read  ಮಾಜಿ ಸಚಿವ ನಾಗೇಂದ್ರ ಜೈಲಿನಿಂದ ಬಿಡುಗಡೆ

ಕಿಶೋರ್ ಕುಮಾರ್, ರಬ್ಬರ್ ನಿಗಮ ಡಿ ಎಮ್
ಕೊಂಬಾರು ಸಿ.ಆರ್.ಸಿ. ಕಾಲೋನಿಯ ನೀರಿನ ಸಮಸ್ಯೆಯ ಬಗ್ಗೆ ತಿಳಿದಿದೆ, ಕೂಡಲೇ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ, ಈ ಬಗ್ಗೆ ಈ ಹಿಂದೆಯೇ ನಮ್ಮ ಅಧಿಕಾರಿಗಳಿಗೆ ಹೇಳಿದ್ದೆನೆ, ಈ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ನಮ್ಮ ನಿಗಮದಲ್ಲಿ ಕೆಲಸ ಆದ ಬಳಿಕವೇ ಹಣ ಬಿಡುಗಡೆಯಾಗುತ್ತದೆ .

error: Content is protected !!
Scroll to Top