ಕಡಬ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.15. ಬೀಡಿ ಬ್ರ್ಯಾಂಚ್ ಗೆಂದು ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೋರ್ವರು ಕೊಯಿಲ ಗ್ರಾಮದ ಸಂಪಡ್ಕ ಎಂಬಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ಕೋಡಿಂಬಾಳ ಗ್ರಾಮದ ದಾಸರಗುಡ್ಡೆ ನಿವಾಸಿ ಬಾಬು ಎಂಬವರ ಪತ್ನಿ ಸುಮತಿ ಎಂಬವರು ಸೋಮವಾರದಂದು ನಾಪತ್ತೆಯಾಗಿದ್ದು, ಈ ಬಗ್ಗೆ ಅವರ ಗಂಡ ಬಾಬು ಅವರು ಕಡಬ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರ ವಿನಯ ಎಂಬವರನ್ನು ಕೊಯಿಲ ಸಮೀಪದ ಸಂಪಡ್ಕ ಎಂಬಲ್ಲಿನ ಅವರ ಸಂಬಂದಿಕರ ಮನೆಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯು ತಾನು ಪ್ರಿಯಕರನ ಜತೆ ಜೀವನ ನಡೆಸುವುದಾಗಿ ಹೇಳಿಕೆ ನೀಡಿದ್ದು, ಪೊಲೀಸರು ವಿನಯನ ಜತೆ ಕಳುಹಿಸಿ ಕೊಟ್ಟಿದ್ದಾರೆ.

error: Content is protected !!
Scroll to Top