ಕೊರೋನಾ ಆತಂಕ ➤ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂಪ್ರೇರಿತ ಬಂದ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು 11, ದ.ಕ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬ್ಯೂಟಿ ಪಾರ್ಲರ್‌‌ಗಳ ಸ್ವಯಂ ಪ್ರೇರಿತ ಬಂದ್‌‌ಗೆ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಗ್ರಾಹಕರು ಹಾಗೂ ಸೌಂದರ್ಯ ತಜ್ಞರ ಆರೋಗ್ಯದ ಹಿತದೃಷ್ಟಿಯಿಂದ ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್‌‌ಗೆ ನಿರ್ಧಾರ ಮಾಡಿದ್ದು, ಮುಂದಿನ ಸೂಚನೆಯವರೆಗೆ ಸ್ವಯಂ ಪ್ರೇರಿತ ಬಂದ್‌‌ ಮಾಡಲು ತೀರ್ಮಾನಿಸಿದ್ದಾರೆ.

ಕೊರೋನಾ ಭೀತಿಯಿಂದಾಗಿ ಜಿಲ್ಲಾಯಾದ್ಯಂತ ಬ್ಯೂಟಿ ಪಾರ್ಲರ್‌‌‌‌‌ಗಳನ್ನು ಸ್ವಯಂ ಪ್ರೇರಿತ ಬಂದ್‌ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ದ.ಕ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಬಬಿತಾ ಶೆಟ್ಟಿ ಮಾಹಿತಿ ನೀಡಿದ್ದಾರೆ.

Also Read  ಮಂಗಳೂರು: 'ಆಟೋ ರಾಜಾಕನ್ಮಾರ್' ವತಿಯಿಂದ ತೈಲ ಬೆಲೆಯೇರಿಕೆ ಖಂಡಿಸಿ ರಿಕ್ಷಾ ಚಲೋ

error: Content is protected !!
Scroll to Top