ಪುತ್ತೂರು : ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೇರಿ 5 ಮಂದಿಗೆ ಕೋವಿಡ್ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಪುತ್ತೂರು ,ಜು.11: ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್, ಅದೇ ಠಾಣೆಯಲ್ಲಿರುವ ಮಹಿಳಾ ಕಾನ್‌ಸ್ಟೇಬಲ್ ಒಬ್ಬರ ತಾಯಿ ಸೇರಿದಂತೆ 5 ಮಂದಿಗೆ ಪುತ್ತೂರು ತಾಲೂಕಿನಲ್ಲಿ ಕೋವಿಡ್ ದೃಢಗೊಂಡ ಬಗ್ಗೆ ವರದಿಯಾಗಿದೆ.

ಪುತ್ತೂರು ನಗರ ಪೊಲೀಸ್ ಠಾಣೆಯ 30 ವರ್ಷ ಪ್ರಾಯದ ಕಾನ್‌ಸ್ಟೇಬಲ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಒಬ್ಬರ 40 ವರ್ಷ ಪ್ರಾಯದ ತಾಯಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾನ್‌ಸ್ಟೇಬಲ್ ಅವರ ಸಂಪ್ಯ ವಸತಿ ಗೃಹದ ಕೊಠಡಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಮಹಿಳಾ ಕಾನ್‌ಸ್ಟೇಬಲ್ ಅವರ ತಾಯಿ ಇರುವ ಪುತ್ತೂರು ವಸತಿ ಗೃಹದ ಕೊಠಡಿಯನ್ನೂ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

Scroll to Top