ಡಿಜಿಟಲ್ ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮ- ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 10, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಡಿಜಿಟಲ್ ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮ “ಗೋಯಲ್” (ಸ್ವಯಂ ನಾಯಕರಾಗಿ ರೂಪುಗೊಳ್ಳುವುದು) ಪ್ರಾರಂಭಿಸಿದೆ.

ದುರ್ಗಮ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡದ ಯುವಕರು ಡಿಜಿಟಲ್ ವಿಶ್ವವನ್ನು ಕರಗತ ಮಾಡಿಕೊಂಡು ಅದನ್ನು ಬುಡಕಟ್ಟು ಸಮುದಾಯಕ್ಕೆ ತಲುಪಿಸುವ ಮೂಲಕ ಡಿಜಿಟಲ್ ಭಾರತದ ಧ್ಯೇಯಗಳನ್ನು ಅರ್ಥಮಾಡಿಕೊಂಡು ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಡಿಜಿಟಲ್ ಪ್ಲಾಟ್‍ಫಾರಂಗಳನ್ನು ಬಳಸಿಕೊಳ್ಳಲು ಅನುವಾಗಿಸುವುದು ಈ ಕಾರ್ಯಕ್ರಮದ ಗುರಿಯಾಗಿರುತ್ತದೆ.

ಡಿಜಿಟಲ್ ಸಾರಕ್ಷತೆ, ಉದ್ಯಮದಾರಿಕೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಸಲಹೆಗಾರಿಕೆ ಒದಗಿಸುವ ಮುಖಾಂತರ ತಮ್ಮ ಸಮುದಾಯಗಳಿಗೆ ಗ್ರಾಮ ಮಟ್ಟದಲ್ಲಿ ಡಿಜಿಟಲ್ ಯುವ ನಾಯಕರಾಗಿ ರೂಪುಗೊಳ್ಳಲು ಅನುಕೂಲವಾಗಲು ಡಿಜಿಟಲ್ ತಂತ್ರಜ್ಞಾನದ ಪ್ರತಿಭೆಯನ್ನು ಬೆಳೆಸುವುದು ಈ ಉಪಕ್ರಮದ ಪ್ರಮುಖ ಧ್ಯೇಯವಾಗಿರುತ್ತದೆ. ಈ ಕಾರ್ಯಕ್ರಮಕ್ಕಾಗಿ ಸಮರ್ಪಿತವಾದ ಪೋರ್ಟಲ್ goal.tribal.gov.in ರಲ್ಲಿ ಎಲ್ಲಾ ವಿವರಗಳು ಮತ್ತು ಮಾಹಿತಿಯು ದೊರೆಯುವುದು, ಆಸಕ್ತಿಯುಳ್ಳ ಮಾರ್ಗದರ್ಶನ ಪಡೆಯುವವರು (ಬುಡಕಟ್ಟು ಯುವಕರು) ಮತ್ತು ಮಾರ್ಗದರ್ಶನ ನೀಡುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸ್ವೀಕರಿಸಲು ಜುಲೈ 14 ಕೊನೆಯ ದಿನ.

Also Read  ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಹೆಚ್ಚಿನ ಮಾಹಿತಿಗಾಗಿ goal.tribal.gov.in ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ 0824-2451269, 0824-2450114 ಸಂಪರ್ಕಿಸಬಹುದು. ಮಾರ್ಗದರ್ಶಕರಿಗೆ (ಮೆಂಟರ್ಸ್) ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಫೇಸ್‍ಬುಕ್‍ನಿಂದ “ಭಾಗವಹಿಸಿದ ಪ್ರಮಾಣ ಪತ್ರ’’ ನೀಡಲಾಗುವುದು. ಕೈಗಾರಿಕೆ ಸೇರಿದಂತೆ ಆಸಕ್ತ ಪ್ರಮುಖರ ಗುಂಪಿನೊಂದಿಗೆ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಅಥವಾ ಫೇಸ್‍ಬುಕ್ ಏರ್ಪಡಿಸುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಆದ್ಯತೆ ಪ್ರವೇಶಾವಕಾಶ ಲಭ್ಯ. ಸಲಹೆಗಾರರಾಗಿರುವ ಬಗ್ಗೆ ವ್ಯಕ್ತಿಗತ ವಿವರಗಳನ್ನು ಗೋಯಲ್‍ನಲ್ಲಿ ಪ್ರಕಟಿಸಲಾಗುತ್ತದೆ. ಮಾರ್ಗದರ್ಶನ ಪಡೆಯುವವರಿಗೆ (ಮೆಂಟೀಸ್) ಸ್ಮಾರ್ಟ್‍ಫೋನ್ ಮತ್ತು ಒಂದು ವರ್ಷದವರೆಗೆ ಇಂಟರ್‍ನೆಟ್ ಅನುಕೂಲ ನೀಡಲಾಗುತ್ತದೆ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಮತ್ತು ಪರಿಣಿತರು ಮತ್ತು ಕೈಗಾರಿಕಾ ನಾಯಕರಿಂದ ಸಲಹೆ ಪಡೆಯುವ ಅವಕಾಶ. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಫೇಸ್‍ಬುಕ್‍ನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಸಿದ್ದ ಸಂಸ್ಥೆಯಲ್ಲಿ ಇಂಟರ್ನ್‍ಶಿಪ್ ಲಭ್ಯತೆಯ ಅವಕಾಶ ಸಿಗುತ್ತದೆ ಎಂದು ದ.ಕ. ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

Also Read  ಬಹಿರಂಗ ಹರಾಜು

error: Content is protected !!
Scroll to Top