(ನ್ಯೂಸ್ ಕಡಬ)newskadaba.com ಮಂಗಳೂರು, ಜು. 10 ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ಇಂಗ್ಲೀಷ್ ವಿಭಾಗ ಇವರ ಸಹಯೋಗದಲ್ಲಿ ಕೋವಿಡ್-19 ನಂತರದ ಉದ್ಯೋಗ ಮಾರುಕಟ್ಟೆ ಸ್ಥಿತಿ ಮತ್ತು ಉದ್ಯೋಗಾಂಕ್ಷಿಗಳು ಅದಕ್ಕೆ ನಡೆಸಬೇಕಾದ ಸಿದ್ದತೆ ವಿಶೇಷ ವೆಬಿನಾರ್ ಕಾರ್ಯಕ್ರಮ ಜುಲೈ 9 ರಂದು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಪ್ರಚಾರ ಅಧಿಕಾರಿ ರೋಹಿತ್.ಜಿ.ಎಸ್, ಕೋವಿಡ್ ನಂತರ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರತರವಾದ ಏರಿಳಿತಳಾಗಿದ್ದು ಹಲವಾರು ಬದಲಾವಣೆಗಳಾಗಿವೆ. ಈ ಬದಲಾವಣೆಯ ಸಮುದಾಯದಲ್ಲಿ ಉದ್ಯೋಗಾಂಕ್ಷಿಗಳು ಹೆಚ್ಚಿನ ಕೌಶಲ್ಯ ಮತ್ತು ಜ್ಞಾನ ಹೊಂದಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಹರೀಶ್ ಶೆಟ್ಟಿ ಮಾತನಾಡಿ ಕೋವಿಡ್-19 ನಂತರ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾದ ಪ್ರಮುಖ ಬದಲಾವಣೆಗಳು ಯಾವ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅವಕಾಶಗಳಿವೆ ಎಂಬುದರ ಕುರಿತು ಮಾಹಿತಿ ನೀಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆಲವೊಂದು ಆನ್ ಲೈನ್ ಉಚಿತ ಕಾರ್ಯಗಾರಗಳನ್ನು ನಡೆಸುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಸತೀಶ್ ಶೆಟ್ಟಿ, ಕಾಲೇಜಿನ ಸಂಚಾಲಕ ದೇವಾನಂದ ಪೈ, ಪ್ರೀತಾ ಭಂಡಾರಿ, ಗಿರೀಶ್ ಕುಮಾರ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.