ಪಯಸ್ವಿನಿ ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.10. ಪಯಸ್ವಿನಿ ನದಿಯಲ್ಲಿ ನೀರು ಪಾಲಾಗಿದ್ದ ಯುವಕನ ಮೃತದೇಹವು ಭಾನುವಾರ ಬೆಳಿಗ್ಗೆ ಸನಿಹದಲ್ಲೇ ದೊರೆತಿದೆ.

ನೀರು ಪಾಲಾದ ಯುವಕನನ್ನು ಕನಕಮಜಲು ನಿವಾಸಿ ಹರೀಶ್ ಮಳಿ ಎಂಬವರ ಪುತ್ರ ಅಶ್ವಿತ್ ಎಂದು ಗುರುತಿಸಲಾಗಿದೆ. ಅಶ್ವಿತ್ ತನ್ನ ಸ್ನೇಹಿತನೊಂದಿಗೆ ಶನಿವಾರದಂದು ಪಯಸ್ವಿನಿ ನದಿಗೆ ತೆರಳಿ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಓರ್ವನೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಮಗುಚಿ ನೀರು ಪಾಲಾಗಿದ್ದರು‌. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಮೃತದೇಹದ ಪತ್ತೆ ಕಾರ್ಯ ಆರಂಭಿಸಿದ್ದರು. ಭಾನುವಾರದಂದು ಮೃತದೇಹ ದೊರೆತಿದೆ.

Scroll to Top