ಗುರುಪುರ: ಬಂಗ್ಲೆಗುಡ್ಡ ಗುಡ್ಡ ಕುಸಿದ ಸ್ಥಳಕ್ಕೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಭೇಟಿ

(ನ್ಯೂಸ್ ಕಡಬ)newskadaba.com ಮಂಗಳೂರು,ಜು.06, ನಗರದ ಹೊರವಲಯದ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ಭಾನುವಾರ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇದರಿಂದ ಸುಮಾರು 7 ಮನೆಗಳಿಗೆ ಹಾನಿಯಾಗಿದ್ದು, ಇಂದು ಈ ಸ್ಥಳಕ್ಕೆ ಎಸ್ಡಿಪಿಐ ರಾಜ್ಯಾದ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಿಮಗೆ ನ್ಯಾಯಬಧ್ದವಾಗಿ ದೊರಕಬೇಕಾದ ಪರಿಹಾರ ಕಾರ್ಯಕ್ಕೆ ಎಸ್ಡಿಪಿಐ ಸಹಕರಿಸಲಿದೆ ಎಂದು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಎಸ್ಡಿಪಿಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಹೆಚ್, ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಐ.ಎಂ.ಆರ್, ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು, ಜೊತೆ ಕಾರ್ಯದರ್ಶಿ ಉಸ್ಮಾನ್ ಗುರುಪುರ, ವಾಮಂಜೂರು ವಲಯ ಅಧ್ಯಕ್ಷ ರಝಾಕ್ ಗುರುಪುರ, ಕೈಕಂಬ ವಲಯ ಸಮಿತಿ ಅಧ್ಯಕ್ಷ ಝಾಕಿರ್ ಮಳಲಿ, ಕಾರ್ಯದರ್ಶಿ ಸಾಹಿಕ್, ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷ ಎ.ಕೆ.ಮುಸ್ತಫಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಬಾಲಕರ ವಿದ್ಯಾರ್ಥಿ ನಿಲಯಗಳ ಅರ್ಜಿ ಆಹ್ವಾನಕ್ಕೆ ಅವಧಿ ವಿಸ್ತರಣೆ

error: Content is protected !!
Scroll to Top