ಕೊರೋನಾ ಸೋಂಕಿತ ಪುತ್ತೂರಿನ ಯುವಕ ಆಸ್ಪತ್ರೆಯಿಂದ ಪರಾರಿ ➤ ಜನತೆಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.05. ಕೊರೋನಾ ಸೋಂಕಿತ ಯುವಕನೋರ್ವ ನಗರದ ಕೋವಿಡ್ ಆಸ್ಪತ್ರೆಯಿಂದ ಭಾನುವಾರದಂದು ಪರಾರಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.

ತಪ್ಪಿಸಿಕೊಂಡಿರುವ ಯುವಕನನ್ನು ಪುತ್ತೂರು ನಿವಾಸಿ ದೇವರಾಜ್(18) ಎಂದು ಗುರುತಿಸಲಾಗಿದೆ. ಕೊರೋನ ಶಂಕೆಯಿಂದ ಜುಲೈ 01 ರಂದು ತಾನೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ ದೇವರಾಜ್ ಗೆ ಭಾನುವಾರದಂದು ಕೊರೋನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಜೆ ವೇಳೆಗೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ.

ಈತನ ಪತ್ತೆಯಾದರೆ ಪಾಂಡೇಶ್ವರ ಪೊಲೀಸ್ ಠಾಣೆ 0824-2220518 ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ 100/ 0824-2220800 ಮಾಹಿತಿ ನೀಡಲು ಕೋರಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಲಾಕ್‌ಡೌನ್ ಜಾರಿ ಬಳಿಕ ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ ➤ 176 ಅನಿವಾಸಿ ಕನ್ನಡಿಗರನ್ನು ಹೊತ್ತು ಮಂಗಳೂರಿಗೆ ಆಗಮನ

error: Content is protected !!
Scroll to Top