(ನ್ಯೂಸ್ ಕಡಬ) newskadaba.com ನವದೆಹಲಿ,ಜು.04: ಮತ್ತೊಮ್ಮೆ ನಭೋ ಮಂಡಲದಲ್ಲಿ ಕೌತುಕಗೊಳ್ಳಲಿದೆ.ಇತ್ತೀಚೆಗಷ್ಟೇ ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಪ್ರಸಕ್ತ ವರ್ಷದ ಮೂರನೇ ತೆಳು ಛಾಯೆಯ ಚಂದ್ರಗ್ರಹಣ ಜುಲೈ 5ರ ಭಾನುವಾರ ಸಂಭವಿಸಲಿದೆ.
2020ರಲ್ಲಿ ಎರಡು ಬಾರಿ ಚಂದ್ರಗ್ರಹಣ, ಒಂದು ಬಾರಿ ಸೂರ್ಯಗ್ರಹಣ ಗೋಚರಿಸಿದ್ದು, ನಾಲ್ಕನೇ ಗ್ರಹಣ ಜುಲೈ 5ರಂದು ಗೋಚರಿಸಲಿದೆ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.ಜುಲೈ 5ರ ಭಾನುವಾರ ಸಂಭವಿಸುವ ತೆಳುಛಾಯೆ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ 11.22ಕ್ಕೆ ಗ್ರಹಣ ಪೂರ್ಣಗೊಳ್ಳಲಿದೆ. ಒಟ್ಟು ಎರಡು ತಾಸು 45 ನಿಮಿಷಗಳ ಕಾಲ ಗ್ರಹಣ ನಡೆಯಲಿದೆ. ನವೆಂಬರ್ 30ರಂದು ಚಂದ್ರಗ್ರಹಣ ಸಂಭವಿಸಲಿದೆ. ಆದರೆ ಇದು ಭಾರತದಲ್ಲಿ ಗೋಚರವಾಗವುದಿಲ್ಲ. ಏಷ್ಯಾ ಭಾಗ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕ್, ಅರ್ಕಾಟಿಕ್ ಪ್ರದೇಶದಲ್ಲಿ ಗ್ರಹಣ ಗೋಚರಿಸಲಿದೆ.