ಲಂಡನ್: ಭಯೋತ್ಪಾದಕ ದಾಳಿಗೆ ಏಳು ಬಲಿ, 48 ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com ಲಂಡನ್,ಜೂ.4. ಚೂರಿಗಳನ್ನು ಝಳಪಿಸುತ್ತಿದ್ದ, ನಕಲಿ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದ ಮೂವರು ಭಯೋತ್ಪಾದಕರು ಶನಿವಾರ ರಾತ್ರಿ ಮಧ್ಯ ಲಂಡನ್‌ನಲ್ಲಿ ಮಾರಣಹೋಮ ನಡೆಸಿದ್ದಾರೆ. ರಾತ್ರಿ 10 ಗಂಟೆಗೆ(ಭಾರತೀಯ ಕಾಲಮಾನ ಸೋಮವಾರ ನಸುಕಿನ 2:30 ಗಂಟೆ) ಲಂಡನ್ನಿನ ಹೆಗ್ಗುರುತು ಲಂಡನ್ ಬ್ರಿಡ್ಜ್‌ನಲ್ಲಿ ಅತಿವೇಗದಿಂದ ಚಲಿಸುತ್ತಿದ್ದ ಬಿಳಿಯ ಬಣ್ಣದ ವ್ಯಾನ್‌ನಲ್ಲಿದ್ದ ಈ ರಾಕ್ಷಸರು ಪಾದಚಾರಿ ಗಳ ಮೇಲೆ ವಾಹನವನ್ನು ನುಗ್ಗಿಸಿದ ಬಳಿಕ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿದ್ದ ಜನರನ್ನು ಚೂರಿಗಳಿಂದ ಮನಬಂದಂತೆ ಇರಿದಿದ್ದಾರೆ. ಈ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. ಜೂ.8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಈ ಭಯೋತ್ಪಾದಕ ದಾಳಿ ನಡೆದಿದೆ.

Also Read  ಬಡವರ ನೋವಿಗೆ ಸ್ಪಂದಿಸಿದ ಹುಚ್ಚ ವೆಂಕಟ್ ➤ ದಿನಸಿ ಕಿಟ್ ವಿತರಣೆ

ವ್ಯಾನ್‌ನ್ನು ಬ್ರಿಡ್ಜ್‌ನಲ್ಲಿಯ ಪಾದಚಾರಿಗಳ ಮೇಲೆ ನುಗ್ಗಿಸಿದ ಬಳಿಕ ಅದನ್ನು ಅಲ್ಲಿಯೇ ಬಿಟ್ಟ ದಾಳಿಕೋರರು ಭಾರೀ ಗಾತ್ರದ ಚೂರಿಗಳನ್ನು ಝಳಪಿಸುತ್ತ ಅಲ್ಲಿಂದ ಓಡಿ ಸಮೀಪದ ಬರೋ ಮಾರುಕಟ್ಟೆ ಪ್ರದೇಶದಲ್ಲಿಯ ಬಾರ್‌ಗಳು ಮತ್ತು ರೆಸ್ಟೋರಂಟ್‌ಗಳಿಗೆ ನುಗ್ಗಿ ‘ಇದು ಅಲ್ಲಾಹುವಿಗಾಗಿ ’ಎಂದು ಕೂಗುತ್ತ, ಮೋಜಿನಲ್ಲಿದ್ದವರನ್ನು ಮನಸ್ವೀ ಇರಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!
Scroll to Top