ಉಳ್ಳಾಲ: ಕೊರೋನಾ ನಿರ್ವಹಣೆಗೆ ವಾರ್ಡುವಾರು ತಂಡ ರಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 30, ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವಿಪರೀತವಾಗಿ ಹರಡುತ್ತಿದೆ.

ಉಳ್ಳಾಲ ಅಜಾದ್‍ನಗರದ ಇಬ್ಬರು ಮಹಿಳೆಯರಿಗೆ ಪಾಸಿಟಿವ್, ಅದರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಪ್ರಸಕ್ತ ಅಜಾದ್‍ನಗರ ಮತ್ತೊಂದು ಮನೆಯಲ್ಲಿ 16 ಪಾಸಿಟಿವ್ ಕೇಸುಗಳು ದೃಢಪಟ್ಟಿದೆ. ಸಮ್ಮರ್ ಸ್ಯಾಂಡ್ 2, ಕೋಡಿ-1, ತಾಜ್‍ಮಹಲ್-1 ಮತ್ತು ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ 4 ಪತ್ತೆಯಾಗಿದ್ದು, ಈವರೆಗೆ 26 ಕೇಸುಗಳು ಒಂದು ವಾರದಲ್ಲಿ ದೃಢಪಟ್ಟಿದೆ.

ಉಳ್ಳಾಲದ ನಾಗರಿಕರ ಆರೋಗ್ಯ ಹಿತದೃಷ್ಠಿಯಿಂದ ಕೊರೋನಾ ವೈರಸ್‍ನ್ನು ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿ, ದೇವಸ್ಥಾನ, ಮಸೀದಿ, ಚರ್ಚ್, ಹಾಗೂ ಸಂಘ ಸಂಸ್ಥೆಗಳಿಂದ ಆರೋಗ್ಯವಂತ 25 ರಿಂದ 45 ವರ್ಷಗಳ ಒಳಗಿನ ಸ್ಥಳೀಯರು, ಆಸಕ್ತಿಯುಳ್ಳವರು ಸೇರಿಸಿಕೊಂಡು 6 ರಿಂದ 8 ಜನರ ತಂಡ ರಚನೆ ಮಾಡಿಕೊಂಡು ಸ್ಥಳೀಯ ಏರಿಯಾದಲ್ಲಿ ಈ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸಿಕೊಳ್ಳುವುದು ಹಾಗೂ ಪೇಟೆ ಅಂಗಡಿಗಳಿಗೆ ಹೋಗುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಒಬ್ಬ ವ್ಯಕ್ತಿಯಿಂದ ಒಂದು ಮೀಟರ್ ಅಂತರವನ್ನು ಕಾಪಾಡಿಕೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡುವುದು ಕೊರೊನಾ ಮುಕ್ತ ವಾರ್ಡುಗಳಾಗಿ/ನಿಯಂತ್ರಣ ಮಾಡುವುದಕ್ಕಾಗಿ ಈ ತಂಡದ ಸದಸ್ಯರು ಕೆಲಸ ಮಾಡಬೇಕಾಗಿರುತ್ತದೆ. ಈ ತಂಡಕ್ಕೆ ಸಲಹೆ ಸೂಚನೆ ಅಗತ್ಯವಿದ್ದಾಗ ನಗರಸಭೆಯಿಂದ ನೀಡಲಾಗುವುದು ಹಾಗೂ ಸೀಲ್‍ಡೌನ್ ಆಗಿರುವ ಪ್ರದೇಶದಲ್ಲಿ ಯಾರು ಹೊರಗಡೆ ಹೋಗಬಾರದು ಮತ್ತು ಹೊರಗಿನಿಂದ ಬರಬಾರದು, ಅಗತ್ಯವಿದ್ದಲ್ಲಿ ಮಾತ್ರ ಹೋಗತಕ್ಕದ್ದು ಇದನ್ನು ತಂಡದವರು ಪರಿಶೀಲಿಸಬೇಕು ಮತ್ತು ಅಗತ್ಯ ವಸ್ತುಗಳ ಬೇಡಿಕೆಗೆ ತಕ್ಕಂತೆ ಸಂಬಂಧಿಸಿದವರಿಂದ ಪಡೆದುಕೊಂಡು ಒದಗಿಸುವುದು ನಗರ ಸಭಾಪತಿಯಿಂದ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಲಾಗುವುದು.

Also Read  ಕೊಣಾಜೆ: ಮಹಿಳೆ ನಾಪತ್ತೆ

ಉಳ್ಳಾಲ ನಗರದ ಜನರ ಆರೋಗ್ಯ ಹಿತದೃಷ್ಠಿಯಿಂದ ಕೊರೊನಾ ವೈರಸ್ ಹರಡದಾಗೆ ನಿಯಂತ್ರಣ ಮಾಡಲು ತಂಡದ ಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕಾಗಿ ಉಳ್ಳಾಲ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top