ಯಶಸ್ವಿಯಾಯಿತು ಮಾತೃಪೂರ್ಣ ಯೋಜನೆಯ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com.ಉಡುಪಿ,ಜೂ.27:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ಮೂರು ವರ್ಷಗಳ ಬಳಿಕ ಮಾತೃಪೂರ್ಣ ಯೋಜನೆಯಲ್ಲಿ ಸಫಲತೆಯನ್ನು ಕಾಣುತ್ತಿದೆ. ಇದರೊಂದಿಗೆ ಸರಕಾರದ ಉದ್ದೇಶ ಯಶಸ್ವಿಯತ್ತ ಸಾಗುತ್ತಿದೆ.

ಈ ಯೋಜನೆಯಡಿ ಬಿಸಿಯೂಟದ ಬದಲು ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಿರುವುದರಿಂದ ಕೋವಿಡ್-19ನ ನಡುವೆಯು ಅರ್ಹರಿಗೆ ಪೌಷ್ಟಿಕ ಆಹಾರ ಸರಿಯಾಗಿ ತಲುಪುತ್ತಿರುವುದು ಈ ಯಶಸ್ಸಿಗೆ ಕಾರಣ. ಸರಕಾರ ಮಾತೃಪೂರ್ಣದಡಿ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ತಯಾರಿಸಿ ನೀಡುವುದನ್ನು ಸ್ಥಗಿತಗೊಳಿಸಿದೆ.ಇದರ ಬದಲಾಗಿ ಕಿಟ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.ಎಪ್ರಿಲ್, ಮೇ ತಿಂಗಳಿನಲ್ಲಿ ಒಬ್ಬರಿಗೆ 1,260 ರೂ. ವೆಚ್ಚದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ನೀಡಲಾಗಿದೆ. ಈ ಯೋಜನೆ ಜೂನ್ ವರೆಗೂ ವಿಸ್ತರಣೆಯಾಗಲಿದೆ.

Also Read  ತುಮಕೂರು: ಭೀಕರ ಅಪಘಾತ; 12 ಮಂದಿ ಮೃತ್ಯು

ಉಡುಪಿ ಜಿಲ್ಲೆಯಲ್ಲಿ 5,989 ಗರ್ಭಿಣಿಯರು.5,559 ಬಾಣಂತಿಯರು ಹಾಗೂ ದ.ಕ ಜಿಲ್ಲೆಯಲ್ಲಿ 24,000 ಫಲಾನುಭವಿಗಳು ಮಾತೃಪೂರ್ಣ ಯೋಜನೆಯ ಕಿಟ್ ಪಡೆದುಕೊಂಡಿದ್ದಾರೆ. ಬಿಸಿಯೂಟ ಯೋಜನೆ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಾತೃಪೂರ್ಣ ಯೋಜನೆಯಡಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಮೂರು ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದ್ದು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಬಿಸಿಯೂಟಕ್ಕೆ ಹಾಜರಾಗುತ್ತಿದ್ದರು ಆದರೆ ಎಲ್ಲರೂ ಮನೆಯಿಂದ ಬರಲು ಸಿದ್ದರಿರಲಿಲ್ಲ ಹಾಗಾಗಿ ಶೇ.20%ರಷ್ಟು ಪ್ರಗತಿಸಾಧಿಸಿತ್ತು. ಆದರೆ ಈಗ ಕಿಟ್ ವಿತರಣೆ ಮಾಡುತ್ತಿರುವುದರಿಂದ ಶೇ 100 ಪ್ರಗತಿಯನ್ನು ಸಾಧಿಸಿದೆ.

Also Read  ಉಪ್ಪಿನಂಗಡಿ: ಮಾನವೀಯತೆ ಮೆರೆದ ಸ್ಥಳೀಯರು

error: Content is protected !!
Scroll to Top