ಬೆಂಗಳೂರು ಮತ್ತೆ ಲಾಕ್​ಡೌನ್​​ ಮಾಡುವ ಪ್ರಶ್ನೆಯೇ ಇಲ್ಲ ➤ ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.26: ಕೋವಿಡ್​​-19 ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್​​​ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ಧಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೊರೋನಾ ವೈರಸ್​ ತಡೆಗೆ ಸರ್ವಪಕ್ಷಗಳ ಶಾಸಕರ ಸಭೆ ಕರೆದಿದ್ದೇವೆ. ಈ ಕೋವಿಡ್​​​-19 ಸೋಂಕು ನಿಯಂತ್ರಣೆಗೆ ಶಾಸಕರ ಅಭಿಪ್ರಾಯ ಮುಖ್ಯ. ಬೆಂಗಳೂರು ಮತ್ತೆ ಲಾಕ್​ಡೌನ್​ ಮಾಡುವ ಯೋಚನೆಯೇ ಇಲ್ಲ ಎಂದರು.

 

ಇತ್ತೀಚೆಗಷ್ಟೇ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಸಾಗಿದೆ. ಹೀಗಾಗಿ ಬೆಂಗಳೂರು ಲಾಕ್​ಡೌನ್​ ಮಾಡಲು ಸಾಧ್ಯವಿಲ್ಲ. ಬದಲಿಗೆ ಕೊರೋನಾ ನಿಯಂತ್ರಿಸಲು ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎಲ್ಲಾ ಶಾಸಕರ ಕೇಳಲಿದ್ದೇವೆ. ರಾಜಧಾನಿಯಲ್ಲಿ ಸರ್ಕಾರ ಏನೇ ಮಾಡಬೇಕಾದರೂ ಸ್ಥಳೀಯರ ಶಾಸಕರ ಅಭಿಪ್ರಾಯ ಮುಖ್ಯ ಎಂದು ಬಿ.ಎಸ್ ರವರು ಸ್ಪಷ್ಟನೆ ನೀಡಿದ್ದಾರೆ.

Also Read  ನೀವು ವಾಸಕ್ಕೆ ಯೋಗ್ಯವಾದ ಉತ್ತಮ ಮನೆ ಹುಡುಕುತ್ತಿದ್ದೀರಾ..? ಕಡಬದಲ್ಲಿ ತಲೆಯೆತ್ತಿ ನಿಂತಿದೆ ಸುಸಜ್ಜಿತ ವಸತಿ ನಿಲಯ 'ಗ್ರೀನ್ ಫೀಲ್ಡ್ ಎನ್'ಕ್ಲೇವ್'

 

 

error: Content is protected !!
Scroll to Top