ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ನಾಗಾಲೋಟ

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ.26: ಸತತ 20ನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದ್ದು ಕಳೆದ 20 ದಿನಗಳಲ್ಲಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 10.80 ರಷ್ಟು ಹಾಗೂ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 8.42ರಷ್ಟು ಹೆಚ್ಚಳ ಕಂಡಿದೆ.

ಶುಕ್ರವಾರ ಪೆಟ್ರೋಲ್‌ಗೆ 21 ಪೈಸೆ ಹಾಗೂ ಡೀಸೆಲ್‌ಗೆ 17 ಪೈಸೆ ಏರಿಕೆಯಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್‌ ದರ 80.13 ರೂ. ಹಾಗೂ ಪೆಟ್ರೋಲ್‌ ದರ 80.19 ರೂ. ಗೆ ತಲುಪಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 76.09 ರೂ. ಹಾಗೂ ಪೆಟ್ರೋಲ್‌ ಬೆಲೆ 82.52 ರೂ. ಏರಿಕೆಯಾಗಿದೆ. ಈಗಾಗಲೇ ಲಾಕ್‌ಡೌನ್‌ ಕಾರಣದಿಂದ ಸಂಕಷ್ಟದಲ್ಲಿರುವ ಸಾರಿಗೆ ಉದ್ಯಮ ಹಾಗೂ ಜನರಿಗೆ ಈ ಇಂಧನ ಬೆಲೆ ಏರಿಕೆಯು ಇನ್ನಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

Also Read  ನಾಳೆ ಸಿಸಿಬಿಯಿಂದ ಇಂದ್ರಜಿತ್ ಲಂಕೇಶ್ ವಿಚಾರಣೆ ➤ ಸ್ಯಾಂಡಲ್​​ವುಡ್​ ತಾರೆಯರಿಗೆ ಹೆಚ್ಚಿದ ಆತಂಕ

 

error: Content is protected !!
Scroll to Top