ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ ಕೊರೊನಾ ➤ ಟೆನಿಸಿಗ ಜೊಕೋವಿಕ್‍ಗೂ ಕೊರೊನಾ

(ನ್ಯೂಸ್ ಕಡಬ) newskadaba.com.ಹೊಸದಿಲ್ಲಿ,ಜೂ.25:ಕೊರೊನಾ ಅಟ್ಟಹಾಸದ ನಡುವೆ ದೇಶದಲ್ಲಿ ಪ್ರತಿಯೊಂದು ವಲಯವು ನಿಧಾನವಾಗಿ ಚೇತರಿಸುತ್ತಾ ಇದೆ. ಇದೇ ಸಾಲಿನಲ್ಲಿದೆ ಕ್ರೀಡಾ ಕ್ಷೇತ್ರವು ಕೂಡ ಇದೀಗ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿರುವ ಬೆನ್ನಲ್ಲೇ ಆಟಗಾರರೇ ಕೊರೊನಾಗೆ ತುತ್ತಾಗಿರುತ್ತಿರುವ ಆಘಾತಕಾರಿ ಸುದ್ದಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ.


ಮಂಗಳವಾರ ಈ ಸಾಲಿಗೆ ಟೆನಿಸಿಗ ನೊವಾಕ್ ಜೊಕೋವಿಕ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಸಹಿತ ಬಹಳಷ್ಟು ಕ್ರೀಡಾಪಟುಗಳು ಸೇರ್ಪಡೆಗೊಂಡಿದ್ದು ಕ್ರೀಡಾ ಲೋಕದಲ್ಲಿ ಆತಂಕ ಮನೆ ಮಾಡಿದೆ.ಟೆನಿಸಿಗ ನೊವಾಕ್ ಜೊಕೋವಿಕ್ ಅವರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ತಾನೇ ಆಯೋಜಿಸಿದ ಆ್ಯಡ್ರಿಯಾ ಟೂರ್ ಸೌಹಾರ್ದ ಟೆನಿಸ್ ಕೂಟದ ವೇಳೆ ಜೊಕೋವಿಕ್ ಅವರಿಗೆ ಕೊರೊನಾ ಬಂದಿರುವುದು ಆತಂಕಮೂಡಿಸಿದೆ.

Also Read  ಲೈಟ್‌ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ


ಇದರ ಬಗ್ಗೆ ಸ್ಪಷ್ಟನೆ ನೀಡಿದ ಜೊಕೋವಿಕ್ ಫೈನಲ್ ಪಂದ್ಯ ರದ್ದುಗೊಂಡ ಬಳಿಕ ನಾನು ಬೆಲ್ಗ್ರೇಡ್‍ಗೆ ಬಂದು ಪರೀಕ್ಷಿಸಿದಾಗ ಪಾಸಿಟಿವ್ ಫಲಿತಾಂಶ ಬಂದಿದೆ. ಪತ್ನಿ ಜೆಲೆನಾ ಕೂಡ ಈ ಸಾಲಿಗೆ ಸೇರಿದ್ದಾಳೆ. ಆದರೆ ಮಕ್ಕಳ ಫಲಿತಾಂಶ ನೆಗೆಟಿವ್ ಆಗಿದೆ ಎಂದರು. ಇದೀಗ ಕೂಟ ಆಯೋಜಿಸಿರುವ ಜೊಕೋವಿಕ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ನಾಲ್ವರಲ್ಲಿ ಪಾಸಿಟಿವ್ ಬಂದಿದೆ.

error: Content is protected !!
Scroll to Top