ರಾಜ್ಯದಲ್ಲಿಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ: ಸೋಂಕಿತರ ಒಟ್ಟು ಸಂಖ್ಯೆ 9,721ಕ್ಕೆ ಏರಿಕೆ

ಬೆಂಗಳೂರು, ಜೂ.23: ರಾಜ್ಯದಲ್ಲಿ ಇಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು (107) ಹೊರತುಪಡಿಸಿದಂತೆ ಇಂದು ಬಳ್ಳಾರಿ (53), ಬೀದರ್ (22), ಮೈಸೂರು (21), ವಿಜಯಪುರ (16), ಯಾದಗಿರಿ (13) ಹಾಗೂ ಉಡುಪಿ (11) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಇಂದು 274 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ 6,004 ಕೊರೋನ ಸೋಂಕಿತರು ಗುಣಮುಖರಾದಂತಾಗಿದೆ.

Also Read  ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ

ಇದೀಗ ರಾಜ್ಯದಲ್ಲಿ ಒಟ್ಟು 3,563 ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳಿದ್ದು ಇವರಲ್ಲಿ 120 ಜನ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೋನ ಸೋಂಕು ಸಂಬಂಧಿತ 150 ಸಾವು ಸಂಭವಿಸಿದ್ದು, ಚೇತರಿಕೆ ಪ್ರಮಾಣವೇ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

error: Content is protected !!
Scroll to Top