ಎಲಿಮಲೆಯಲ್ಲಿ ವನಮಹೋತ್ಸವ ➤ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ವಲಯ ಅರಣ್ಯಾಧಿಕಾರಿ ಮಂಜುನಾಥ್

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.22. ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಪ್ರತಿವರ್ಷ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸಬೇಕೆಂದರು.

ಮಹಮೂದ್ ಸಖಾಫಿ ಉಸ್ತಾದ್ ದುಆ ನೆರವೇರಿಸಿದರು. ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಬೇಕು. ಪ್ರಕೃತಿಯ ಉಳಿವು ಹಾಗೂ ಬೆಳವಣಿಗೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲಿಮಲೆ ಮಸೀದಿ ಕಮಿಟಿಯವರು ವನಮಹೋತ್ಸವ ಆಚರಿಸುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಅಭಿನಂದಿಸಿದರು.

Also Read  ಉಮ್ರಾ ಯಾತ್ರೆಗೆ ತೆರಳಿದ್ದ ಕಡಬದ ರಿಕ್ಷಾ ಚಾಲಕನಿಗೆ ಹೃದಯಾಘಾತ ➤ ಪವಿತ್ರ ಮಕ್ಕಾದಲ್ಲಿ ಮೃತ್ಯು

ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ, ಅರಣ್ಯ ರಕ್ಷಕರಾದ ಜಯಪ್ರಕಾಶ್ ಚಿದಾನಂದ, ಅರಣ್ಯ ವೀಕ್ಷಕ ಸುರೇಂದ್ರ, ಟಿ.ವೈ. ಇಬ್ರಾಹಿಂ, ಮಹಮ್ಮದ್ ಕುಂಞಿ ಮೇಲೆಬೈಲು, ಅಬೂಬಕ್ಕರ್ ಪಾಣಾಜೆ, ಕಲಂದರ್ ಎಲಿಮಲೆ, ಸಿದ್ದೀಕ್ ಜೀರ್ಮುಕ್ಕಿ, ಸೂಫಿ ಎಲಿಮಲೆ, ಜುನೈದ್ ಸಖಾಫಿ, ಅಬ್ದುಲ್ಲ ಜೀರ್ಮುಕ್ಕಿ, ಹೈದರ್ ಹಾಜಿ, ಅಶ್ರಫ್ ಜೀರ್ಮುಕ್ಕಿ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಕಾರ್ಯದರ್ಶಿ ಹನೀಫ್ ಮೆತ್ತಡ್ಕ ವಂದಿಸಿದರು.

error: Content is protected !!
Scroll to Top