ಹಾಲು ಉತ್ಪಾದಕರಿಗೆ ಶುಭ ಸುದ್ದಿ ➤ ಅದೇನೆಂದು ಗೊತ್ತೇ…??

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.22, ಹೈನುಗಾರಿಕೆಗೆ 1.6 ಲಕ್ಷ ಶೂನ್ಯ ಬಡ್ಡಿ ಸಾಲ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. 3 ಲಕ್ಷ ರೂಪಾಯಿಯವರೆಗೂ ಶೇಕಡಾ 4ರ ಬಡ್ಡಿಗೆ ಆಧಾರ ರಹಿತ ಸಾಲ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರಾಜ್ಯದ ಹಾಲು ಉತ್ಪಾದಕರಿಗೆ ಗರಿಷ್ಠ 1.6 ಲಕ್ಷ ರೂಪಾಯಿಯವರೆಗೆ ಆಧಾರ ರಹಿತ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

3 ಲಕ್ಷ ರೂಪಾಯಿಯವರೆಗೆ ಶೇಕಡಾ 4ರ ಬಡ್ಡಿ ಹಾಗೂ ಆಧಾರ ರಹಿತ ಸಾಲ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಕೃಷಿ ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಹಾಲು ಉತ್ಪಾದಕರಿಗೆ ವಿಸ್ತರಿಸಲಾಗಿದ್ದು, ಶೇಕಡಾ 7ರ ಬಡ್ಡಿದರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸದಿದ್ದಲ್ಲಿ ಕೇಂದ್ರ ಸರ್ಕಾರದಿಂದ ಶೇಕಡಾ 3ರಷ್ಟು ಬಡ್ಡಿ ರಿಯಾಯಿತಿ ಸಿಗುತ್ತದೆ. ಇದನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Also Read  ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ...!

error: Content is protected !!
Scroll to Top