ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಕೋವಿಡ್-19 ➤ 55 ವರ್ಷ ಮೇಲ್ಪಟ್ಟವರಿಗೆ ವಿಶ್ರಾಂತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.22, ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು 13 ಸುರಕ್ಷತಾ ಸೂತ್ರಗಳನ್ನು ನೀಡಿ, 55 ವರ್ಷ ಮೇಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿ ಘೋಷಣೆ ಮಾಡಿದ್ದಾರೆ.

ಠಾಣೆಯ ಒಳಭಾಗಕ್ಕೆ ಯಾರೂ ಬಾರದಂತೆ ನೋಡಿಕೊಳ್ಳಬೇಕು. ಹಾಗೆಯೇ ಠಾಣೆಯ ಹೊರಗಡೆ ಸಾರ್ವಜನಿಕರ ದೂರುಗಳನ್ನು ಆಲಿಸಬೇಕು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಹ್ಯಾಂಡ್‍ಗ್ಲೌಸ್ ಹಾಗೂ ಅಗತ್ಯವಿದ್ದಲ್ಲಿ ಪಿಪಿಇ ಕಿಟ್ ಬಳಸಬೇಕು.

ಅನಾವಶ್ಯಕವಾಗಿ ಠಾಣೆಯ ಒಳಗೆ ಬರಬಾರದು. ಹೊರಗಡೆ ಕೆಲಸ ಮಾಡುವ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ನಿಗದಿತ ಸ್ಥಳದಲ್ಲೇ ಇರಬೇಕು. ಸಾರ್ವಜನಿಕರ ಜತೆ ಮಾತನಾಡುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು.

ಅಪರಾಧಿಗಳನ್ನು ಅವಶ್ಯಕತೆ ಇಲ್ಲದಿದ್ದಲ್ಲಿ ಬಂಧಿಸುವ ಪ್ರಕ್ರಿಯೆ ಮಾಡಬಾರದು. ಬಂಧಿಸಲೇಬೇಕಾದರೆ ಡಿಸಿಪಿ, ಎಸಿಪಿ ಅನುಮತಿ ಪಡೆದು ಠಾಣೆಯ ಹೊರಗೇ ಪ್ರಕ್ರಿಯೆಯನ್ನು ಮುಗಿಸಬೇಕು. ಆಯಾ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್ ಗಳು ಠಾಣೆಯ ಸರಹದ್ದಿನಲ್ಲಿ 25 ಸಿಬ್ಬಂದಿಗಳಿಗೆ ಆಗುವಷ್ಟು ಬಿಸಿನೀರು ಸಿಗುವ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಿಕೊಡಬೇಕು.

Also Read  ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರ ‘ಕಾನು’ ಆ.25 ರಂದು ಉದ್ಘಾಟನೆ

ಠಾಣೆಯ ಒಳಭಾಗದಲ್ಲಿ ಕುಡಿಯಲು ಬಿಸಿನೀರು, ಕೈ-ಕಾಲು ತೊಳೆಯಲು, ಸ್ನಾನ ಮಾಡಲು ಬಿಸಿನೀರು ಸಿಗುವಂತೆ ವ್ಯವಸ್ಥೆ ಮಾಡಬೇಕು. ಠಾಣೆಯಲ್ಲಿ ಯಾವಾಗಲೂ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಠಾಣೆಯ ಯಾವುದೇ ಸಿಬ್ಬಂದಿ ಕ್ವಾರಂಟೈನ್‍ನಲ್ಲಿದ್ದು, ಪಾಸಿಟಿವ್ ಬಂದಿದ್ದರೆ ಇತರರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜಾಗೃತಿ ವಹಿಸಬೇಕು. ಎಂಒಬಿ, ರಿಕವರಿ ಮಾಡಬೇಕಾದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕು. ಜೀಪು, ದ್ವಿಚಕ್ರ ವಾಹನಗಳನ್ನು ಪ್ರತಿದಿನ ಸ್ಯಾನಿಟೈಸರ್ ಮಾಡಬೇಕು. ಯಾರಿಗಾದರೂ ಸೋಂಕು ತಗುಲಿದರೆ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಿ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಮೇಲುಸ್ತುವಾರಿ ನೋಡಿಕೊಂಡು ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.

Also Read  ಭಟ್ಕಳ : ವೆಂಕಟಾಪುರ ನದಿಯಲ್ಲಿ ಮೃತದೇಹ ಪತ್ತೆ

error: Content is protected !!
Scroll to Top