ರಾಜ್ಯದಲ್ಲಿಂದು 416 ಹೊಸ ಕೊರೋನ ಪ್ರಕರಣ ಪತ್ತೆ: 9 ಮಂದಿ ಸಾವು

ಬೆಂಗಳೂರು, ಜೂ.20: ರಾಜ್ಯದಲ್ಲಿ ಶನಿವಾರ 416 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,697 ಆಗಿದ್ದು, ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಈ ವರೆಗೆ 5,391 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3,170 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ ಅತಿಹೆಚ್ಚು, 55 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಬೀದರ್ 73, ಬಳ್ಳಾರಿ, ರಾಮನಗರಗಳಲ್ಲಿ ತಲಾ 38, ಕಲಬುರ್ಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ, ಚಿಕ್ಕಬಳ್ಳಾಪುರ ತಲಾ 5, ದಕ್ಷಿಣ ಕನ್ನಡ, ಮಂಡ್ಯ, ಉತ್ತರಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರಗಳಲ್ಲಿ ತಲಾ 4, ದಾವಣಗೆರೆ 3, ಬಾಗಲಕೋಟೆ, ಶಿವಮೊಗ್ಗ, ಗದಗ, ತುಮಕೂರಿನಲ್ಲಿ ತಲಾ 2, ಬೆಳಗಾವಿ, ಚಾಮರಾಜನಗರ ತಲಾ 1 ಹಾಗೂ ಇತರೆ 1 ಪ್ರಕರಣ ದೃಢಪಟ್ಟಿವೆ.

Also Read  ಭೂಕಂಪನದ ಆತಂಕದ ಬೆನ್ನಲ್ಲೇ ಮನೆ ಮೇಲೆ ಉರುಳಿಬಿದ್ದ ಬಂಡೆಕಲ್ಲು..! ➤ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಇಂದು 181 ಮಂದಿ ಚೇತರಿಕೆಯಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಕಂಡುಬಂದ ಪ್ರಕರಣಗಳ ಪೈಕಿ 22 ಮಂದಿ ಹೊರದೇಶದಿಂದ ಬಂದವರಾದರೆ, 116 ಮಂದಿ ಅನ್ಯ ರಾಜ್ಯಗಳಿಂದ ಬಂದವರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

error: Content is protected !!
Scroll to Top