ನಾಳೆ ಸೂರ್ಯ ಗ್ರಹಣದ ಹಿನ್ನಲೆ ➤ ಕರಾವಳಿಯ ಹಲವು ದೇಗುಲಗಳು ಬಂದ್

(ನ್ಯೂಸ್ ಕಡಬ) newskadaba.com ಕರಾವಳಿ ,ಜೂ.20:  ಜೂ.21ರಂದು ನಭೋ ಮಂಡಲದಲ್ಲಿ ಅಪರೂಪದ ಸೂರ್ಯ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ರಾಜಸ್ಥಾನ, ಹರಿಯಾಣ, ಉತ್ತರಾಖಂಡಗಳ ಕೆಲವು ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ ಆದರೆ ಉಳಿದ ಪ್ರದೇಶದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಲಿದೆ.
21. 6. 2020 ಆದಿತ್ಯವಾರ ಖಂಡ ಗ್ರಾಸ ಸೂರ್ಯಗ್ರಹಣವು ಇರುವುದರಿಂದ ದೇವಸ್ಥಾನಗಳಲ್ಲಿ ಪೂಜಾ ಸಮಯವನ್ನು ಬದಲಾವಣೆ ಗೊಳಿಸಲಾಗಿದೆ. ಬೆಳಿಗ್ಗೆ 10.06 ರಿಂದ ಮಧ್ಯಾಹ್ನ ಗಂಟೆ 1.23 ನಿಮಿಷದ ವರೆಗೆ ಸೂರ್ಯನಿಗೆ ರಾಹು ಗ್ರಹಣ ಸಂಭವಿಸಲಿರುವುದು.

 


ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಬೆಳಿಗ್ಗೆ 7.30ಕ್ಕೆ ಪ್ರಾತಃ ಕಾಲ ಪೂಜೆ ಬಳಿಕ ಮಧ್ಯಾಹ್ನದ ಪೂಜೆಯನ್ನು ಬೆಳಿಗ್ಗೆಯೇ ಗಂಟೆ 9.15ಕ್ಕೆ ಮಾಡಲಾಗುವುದು ಬಳಿಕ ದೇವಸತºಥಾನದ ಬಾಗಿಲು ಮುಚ್ಚಲಾಗುವುದು. ಸಂಜೆ ಗಂಟೆ 4 ರಿಂದ ಗಂಟೆ 7.30ರ ವರೆಗೆ ರಾತ್ರಿ ಪೂಜೆ ನಡೆಯಲಿರುವುದು. ಇತ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ಶ್ರೀ ದೇವರ ನಿತ್ಯದ ಪೂಜಾ ಸಮಯ ಬದಲಾಗಿರುವುದರಿಂದ ದೇವರ ದರ್ಶನದ ಸಮಯ ಬೆಳಿಗ್ಗೆ ಗಂಟೆ 6.30ರಿಂದ 10.00ವರೆಗೆ , ಅಪರಾಹ್ನ ಗಂಟೆ 3.30ರಿಂದ 5.30 ರ ವರೆಗೆ ನಡೆಯಲಿರುವುದು ಭಕ್ತಾಧಿಗಳು ಸಹಕರಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ. ಧರ್ಮಸ್ಥಳದಲ್ಲಿ ದೇವರ ದರ್ಶನ ಇರಲ್ಲ. ನಾಳೆ ಬೆಳಿಗ್ಗೆ 9ರಿಂದ 4ರವರೆಗೆ ದರ್ಶನ ಬಂದ್ ಮಾಡಲಾಗಿದೆ. ಬಳಿಕ ಸಂಜೆ 4ರಿಂದ 9ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

Also Read  ಉಡುಪಿ: ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಸೇವನೆ..!   ➤ ಐವರು ವಿದ್ಯಾರ್ಥಿಗಳು ಅರೆಸ್ಟ್

 

error: Content is protected !!
Scroll to Top