ಕಡಬದ ಡಿ.ಸಿ.ಸಿ ಬ್ಯಾಂಕ್ ಗೂ ತಟ್ಟಿದ ಕೊರೋನಾ ಬಿಸಿ ➤ ಒಂದು ವಾರ ಸ್ವಯಂ ಸೀಲ್ ಡೌನ್

(ನ್ಯೂಸ್ ಕಡಬ)newskadaba.com ಕಡಬ. ಜೂ. 15, ಕಡಬ ಸಿ.ಎ. ಬ್ಯಾಂಕ್ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದಾರೆನ್ನಲಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಡಬ ಶಾಖೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಒಂದು ವಾರಗಳ ಕಾಲ ಸ್ವಯಂ ಸೀಲ್ ಡೌನ್ ಮಾಡಲಾಗಿದೆ.

ಈ ಹಿನ್ನೆಲೆಯಿಂದ ಗ್ರಾಹಕರು ಮೊಬೈಲ್ ಬ್ಯಾಂಕ್ ಮೂಲಕ ಬ್ಯಾಂಕಿನ ಎಲ್ಲಾ ಸೇವೆಗಳನ್ನು ಪಡೆಯಬಹುದು. ಮೊಬೈಲ್ ಬ್ಯಾಂಕ್ ವಾಹನ ಕಡಬ ಶ್ರೀ ರಾಂ ಟವರ್ಸ್ ವಠಾರದಲ್ಲಿ ಬ್ಯಾಂಕ್ ಕಾರ್ಯದ ಅವಧಿಯಲ್ಲಿ ನಿಲ್ಲಲಿದೆ ಗ್ರಾಹಕರು ಎಂದಿನಂತೆ ವ್ಯವಹಾರ ಮಾಡಬಹುದಾಗಿದೆ ಎಂದು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಕೊಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ಬಸ್ ನಿಲ್ದಾಣದಲ್ಲಿ ಪೋಷಕರು ಬಿಟ್ಟು ಹೋಗಿದ್ದ ಮಗು ಮೃತ್ಯು

error: Content is protected !!
Scroll to Top