ಕೊರೊನಾ ಜೊತೆಗೆ ಡೆಂಗ್ಯೂ ಆರ್ಭಟ ➤ 50ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಾಸರಗೋಡು,ಜೂ.12: ಕೊರೋನಾ ಆತಂಕದ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹರಡುತ್ತಿದ್ದು , ಈಗಾಗಲೇ 50 ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೈವಳಿಕೆ , ಪುತ್ತಿಗೆ , ಕುಂಬಳೆ , ಬದಿಯಡ್ಕ , ಮುಳ್ಳೇರಿಯಾ , ಆದೂರು , ಪುಲ್ಲೂರು ಪೆರಿಯ ವ್ಯಾಪ್ತಿಯಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು , ಒಂದೆಡೆ ಕೊರೋನಾ ಭೇಟಿಯ ನಡುವೆ ಸಾಂಕ್ರಾಮಿಕ ರೋಗಗ ಗಳು ಜನತೆ ಹಾಗೂ ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ಸಿಲುಕಿಸಿದೆ.ಕಾಸರಗೋಡು ಜನರಲ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಸರಕಾರಿ ಆಸ್ಪತ್ರೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದಿನಂಪ್ರತಿ ನೂರಾರು ರೋಗಿಗಳು ತಲಪುತ್ತಿದ್ದು ಈ ಪೈಕಿ ಹಲವು ಮಂದಿಗೆ ಡೆಂಗ್ಯೂ ದೃಢಪಟ್ಟಿದೆ.

 

Also Read  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ವತಿಯಿಂದ ಲಕ್ಷದ್ವೀಪದೊಂದಿಗೆ ಐಕ್ಯಮತ ತೋರಿಸಲು ಭಿತ್ತಿಪತ್ರ ಪ್ರದರ್ಶನ


ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲೂ ಡೆಂಗ್ಯೂ ಪತ್ತೆಯಾಗಿದೆ. ಅದೂರು , ಮುಳ್ಳೇರಿಯ ,ಮಿಂಚಿ ಪದವು , ಕರ್ಮ೦ತ್ತೋಡಿ, ಬದಿಯಡ್ಕ ಮೊದಲಾದೆಡೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಮುಳ್ಳೇರಿಯಾ ವ್ಯಾಪ್ತಿಯ 30 , ಬದಿಯಡ್ಕ ವ್ಯಾಪ್ತಿಯ 25ಮಂದಿಯ ಈಗಾಗಲೇ ಚಿಕಿತ್ಸೆಯಲ್ಲಿದ್ದಾರೆ . ಬೇಸಿಗೆ ಮಳೆ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು , ಕೊರೊನ ಮಹಾಮಾರಿ ಜೊತೆಗೆ ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಸವಾಲಾಗುತ್ತಿದೆ.

 

error: Content is protected !!
Scroll to Top