(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಜೂ.11,12 ಮತ್ತು 13 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂ 11 ಬಳಿಕ ಮುಂಗಾರು ಮತ್ತಷ್ಟು ಚುರುಕುಗೊಳ್ಳುದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡದಲ್ಲಿ ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ಫೋಷಣೆ ಮಾಡಿದೆ.
ಜೂ,1ರಂದೇ ಮುಂಗಾರು ಕೇರಳ ಪ್ರವೇಶಿಸಿತ್ತು ಆದರೆ ನಿಸರ್ಗ ಚಂಡಮಾರುತದಿಂದಾಗಿ ರಾಜ್ಯಕ್ಕೆ ಪ್ರವೇಶ ತಡವಾಗಿತ್ತು ಈಗ ಮುಂಗಾರು ಕರಾವಳಿಗೆ ಪ್ರವೇಶವಾಗಿದ್ದರೂ ಕೂಡ, ಕಳೆದ ಕೆಲವು ದಿನಗಳಿಂದ ಹೇಳಿಕೊಳ್ಳುವಂತ ಮಳೆಯಾಗಿರಳಿಲ್ಲ ಇದೀಗ ಭಾರೀ ಮಳೆಯಾಗುವುದರಿಂದ ಆಯಾ ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರಿಗೆ ಸುರಕ್ಷಿತರಾಗಿರುವಂತೆ ಎಚ್ಚರಿಸುತ್ತಿದೆ. ಜಿಲ್ಲಾಡಳಿತವು ಆರೆಂಜ್ ಹಾಗೂ ಯೆಲ್ಲೋ ವಲಯಗಳ ಮೇಲೆ ನಿಗಾ ಇಡಲಿದೆ.