ಆತ್ಮಹತ್ಯೆಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ನೇತ್ರಾವತಿ ಸೇತುವೆ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದು. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾಗಿರುವ ಯುವಕ ಕುರ್ನಾಡು ನಿವಾಸಿ ಪ್ರವೀಣ್ ಸಪಲ್ಯ(28) ಎನ್ನಲಾಗಿದೆ.


ಈತ ಖಾಸಗಿ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಬರುತ್ತಿದ್ದ ಸಂದರ್ಭ ಸೇತುವೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆ ಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೆ ನದಿಯ ಬಳಿ ಪತ್ತೆಗಾಗಿ ಹುಡುಕಾಟ ಕಾರ್ಯಚರಣೆ ಆರಂಭವಾಗಿದೆ.

Also Read  ಪುತ್ತೂರು: ಒಂಟಿ ವೃದ್ಧರನ್ನು ಟಾರ್ಗೆಟ್ ಮಾಡಿ ► ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯ ಬಂಧನ

error: Content is protected !!
Scroll to Top