(ನ್ಯೂಸ್ ಕಡಬ) newskadaba.com.,ಮಂಗಳೂರುಜೂ.9:ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ಪಿಲಿಕುಳದ ಡಾ ಶಿವರಾಮ ಕಾರಂತ್ ನಿಸರ್ಗಧಾಮ ಜೂ 10 ರಿಂದ ಪ್ರವಾಸಿಗರಿಗೆ ಮತ್ತೆ ಬಾಗಿಲು ತೆರೆಯಲಿದೆ.
ಸರಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಪಿಲಿಕುಳದ ಜೈವಿಕ ಉದ್ಯಾನ, ಸಂಸ್ಕøತಿ ಗ್ರಾಮ, ಆರ್ಬೋರೇಟಮ್, ಮತ್ತು ಗುತ್ತು ಮನೆಯ ಆಕರ್ಷಣೆಗಳನ್ನು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು, ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಇನ್ನೂ ಕೆಲದಿನಗಳ ಕಾಲ ಕಾಯಬೇಕಾಗಿದೆ.
ಸಾರ್ವಜನಿಕರು ನಿಸರ್ಗಧಾಮದ ಆಕರ್ಷಣೆಗಳನ್ನು ವೀಕ್ಷಿಸುವಾಗ 6ಅಡಿ ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧಾರಣೆ ಕಡ್ಡಾಯ. ಎಲ್ಲರೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಲಾಗುವುದು, ದೇಹದ ಉಷ್ಣತೆ ಮಿತಿಗಿಂತ ಹೆಚ್ಚಿದ್ದರೆ, ಜ್ವರ, ಕೆಮ್ಮು, ಶೀತ, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸಲಾಗುವುದು. ಎಂದು ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.