ನಾಳೆ ‘ರವಿವಾರ ಲಾಕ್‌ಡೌನ್’ ಇಲ್ಲ

ಬೆಂಗಳೂರು, ಜೂ.6: ಕೊರೋನ ನಿಯಂತ್ರಣಕ್ಕಾಗಿ ಈ ಹಿಂದೆ ರಾಜ್ಯ ಸರಕಾರ ಆದೇಶಿಸಿದ್ದ ‘ರವಿವಾರದ ಲಾಕ್‌ಡೌನ್’ ಜೂ.7ರಂದು ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಸದ ಬಳಿಕ ಕೊರೋನ ಸೋಂಕು ನಿಯಂತ್ರಣದ ಮತ್ತೊಂದು ವಿಧಾನವಾಗಿ ರವಿವಾರದ ಲಾಕ್‌ಡೌನ್‌ಗೆ ರಾಜ್ಯ ಸರಕಾರ ಆದೇಶಿಸಿತ್ತು. ಬಳಿಕ ಮೇ 24ರಂದು ಲಾಕ್ ಡೌನ್ ಮಾಡಲಾಗಿತ್ತು. ರಾಜ್ಯದಲ್ಲಿ ಈ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿತ್ತು.

ಆದರೆ ಅದರ ನಂತರದ ಮೇ 31ರಂದು ಈ ಲಾಕ್‌ಡೌನ್ ತೆರವುಗೊಳಿಸಲಾಗಿತ್ತು. ಸದ್ಯ ಬಹುತೇಕ ಎಲ್ಲಾ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗಿರುವ ಕಾರಣ ಇನ್ನೂ ಈ ರವಿವಾರದ ಲಾಕ್ ಡೌನ್ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ಆದರೆ ರಾತ್ರಿಯ ವೇಳೆಯ ಕರ್ಫ್ಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ ಎನ್ನಲಾಗಿದೆ.

Also Read  ವ್ಯಕ್ತಿಯೊಬ್ಬರ ಮೃತದೇಹ ಪತ್ತೆ ➤ ಕೊಲೆ ಶಂಕೆ..!

error: Content is protected !!
Scroll to Top