breaking news ಉಡುಪಿ ಮುಂಬೈ ಆಘಾತ: ಇಂದು ಒಂದೇ ದಿನ 204 ಮಂದಿಗೆ ಕೊರೋನ ಪಾಟಿಸಿವ್

ಉಡುಪಿ, ಜೂ.5: ಉಡುಪಿಯಲ್ಲಿ ಶುಕ್ರವಾರ ಇಂದು ದಿನ ಮತ್ತೆ 204 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೇರಿಕೆಯಾಗಿದೆ.
ಇಂದಿನ 204 ಪ್ರಕರಣಗಳಲ್ಲಿ 203 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. 157 ಪುರುಷರು, 40 ಮಹಿಳೆಯರು ಮತ್ತು ಏಳು ಮಕ್ಕಳಿಗೆ ಸೋಂಕು ತಾಗಿದೆ.


ಜಿಲ್ಲೆಯಲ್ಲಿ ಗುರುವಾರ 92 ಹೊಸ ಸೋಂಕು ಪ್ರಕರಣಗಳು ದೃಢವಾಗಿತ್ತು. ಇಂದು ಮತ್ತೆ 204 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೆ ಏರಿಕೆ ಕಂಡಿದೆ. ಇದುವರೆಗೆ ಒಟ್ಟು 82 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ.

Also Read  ಸುಳ್ಳು ಸುದ್ದಿ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ- ಸಿಎಂ ಎಚ್ಚರಿಕೆ

error: Content is protected !!
Scroll to Top