ಕರ್ನಾಟಕಕ್ಕೆ “ಮಹಾ” ಕಂಟಕ ➤ ಕೊರೋನಾ ಸೊಂಕು ಹೆಚ್ಚಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ 05: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಪತ್ತೆಯಾಗಿರುವ 4,320 ಸೋಂಕಿತ ಪ್ರಕರಣಗಳ ಪೈಕಿ ಶೇ. 59.28 ಅಂದರೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ 2,561 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

 

 

ಕರ್ನಾಟಕಕ್ಕೆ ಬಹುಪಾಲು ಅಂತರ್ ರಾಜ್ಯ ಪ್ರಯಾಣಿಕರಿಂದಲೇ ಹೆಚ್ಚು ಸೋಂಕು ಹರಡಿದ್ದು, ಒಟ್ಟು ಪ್ರಕರಣಗಳ ಪೈಕಿ 2,914 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದಾರೆ. ಉಳಿದಂತೆ ಸೋಂಕಿತರ ಸಂಪರ್ಕದಿಂದ 992, ವಿದೇಶ ಪ್ರಯಾಣಿಕರಿಂದ 131 ಹಾಗೂ ಸಾರಿ ಹಿನ್ನೆಲೆಯವರಿಂದ 70, ವಿಷಮಜ್ವರ ಮಾದರಿ ಕಾಯಿಲೆ ಹಿನ್ನೆಲೆಯ 46 ಮಂದಿಗೆ ಸೋಮಕು ಹರಡಿದೆ. ಉಳಿದಂತೆ 167 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನಿನ್ನೆ ದಾಖಲೆಯ 257 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ. ಇವರಲ್ಲಿ 1610 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 2651 ಆಗಿದೆ.

 

Also Read  ಪುತ್ತೂರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!

 

error: Content is protected !!
Scroll to Top