ಇಂದು ಚಂದ್ರಗ್ರಹಣ ➤ ನಭೋ ಮಂಡಲದಲ್ಲಿ ಕೌತುಕ

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ 05: 2020ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು, ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ (ಜೂನ್ 5ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.

 

ಈ ವರ್ಷದ ಜನವರಿ 10ರಂದು ಪ್ರಥಮ ಚಂದ್ರಗ್ರಹಣ ಸುಮಾರು 4ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೇ  ಚಂದ್ರಗ್ರಹಣ ಜೂನ್ 5ಮತ್ತು 6ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse ಎಂದು ಹೆಸರಿಸಲಾಗಿದ್ದು, ಇಂದು ಚಂದ್ರನ ಮೇಲ್ಮೈ ಶೇ.75ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರವಾಗದಿರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇಂದಿನ ಖಗೋಳ ವಿಸ್ಮಯವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಭಾರತದಾದ್ಯಂತ ಈ ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣ ಇಂದು ರಾತ್ರಿ 11.15ಕ್ಕೆ ಆರಂಭವಾಗಲಿದ್ದು, ಜೂನ್ 6ರಂದು 12.54ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದು, ಜೂನ್ 6ರ ಬೆಳಗ್ಗಿನ ಜಾವ 2.34ಕ್ಕೆ ಪೂರ್ಣಗೊಳ್ಳಲಿದೆ.

Also Read  ಶೌಚಾಲಯದಲ್ಲಿ ಕುಸಿದುಬಿದ್ದು ► ರಬ್ಬರ್ ಕಾರ್ಮಿಕ ಮೃತ್ಯು

 

error: Content is protected !!
Scroll to Top