ಕರಾವಳಿಯಲ್ಲಿ ಮಳೆಯ ಸಿಂಚನ ➤ ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ 05: ಕರಾವಳಿಯಲ್ಲಿ ನಿರೀಕ್ಷೆಯಂತೆ ನೈರುತ್ಯ ಮುಂಗಾರು ಗುರುವಾರ ಮಧ್ಯಾಹ್ನ ಕರಾವಳಿ ಮೂಲಕ ರಾಜ್ಯ ಪ್ರವೇಶಿಸಿದೆ.ಜೂನ್‌ 1ರಂದು ಕೇರಳ ಪ್ರವೇಶಿಸಿದ್ದ ನೈರುತ್ಯ ಮುಂಗಾರು ರಾಜ್ಯಕ್ಕೂ ಕಾಲಿಟ್ಟಿದ್ದು, ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಗಾಲದ ಚಿತ್ರಣ ಮೂಡಿಸಿದೆ.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದಿದ್ದು, 2.83 ಸೆಂ.ಮೀ. ಮಳೆಯಾಗಿದೆ. ಘಟ್ಟದ ತಪ್ಪಲಿನ ಸುಳ್ಯ ತಾಲ್ಲೂಕಿನಲ್ಲಿ 4.5 ಸೆಂ.ಮೀ. ಮಳೆಯಾಗಿದೆ. ಗಾಳಿಗೆ ಅಲ್ಲಲ್ಲಿ ಮರದ ರೆಂಬೆ-ಕೊಂಬೆಗಳು ಬಿದ್ದಿವೆ. ಸಮುದ್ರದ ಅಬ್ಬರ ಹೆಚ್ಚಿದೆ. ‘ಮುಂಗಾರು ರಾಜ್ಯ ಪ್ರವೇಶಿಸಿದರೂ ಮುಂದಿನ ನಾಲ್ಕೈದು ದಿನ ಭಾರಿ ಮಳೆಯ ಸಾಧ್ಯತೆಗಳಿಲ್ಲ. ಆದರೆ, ಇದೇ 8ರ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರಿ ಮಳೆ ಸುರಿಯಬಹುದು’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ನಿಸರ್ಗ ಚಂಡಮಾರುತವು ಬುಧವಾರವೇ ಉತ್ತರ ದಿಕ್ಕಿಗೆ ಚಲಿಸಿದ್ದು, ಕರಾವಳಿಯಲ್ಲಿ ಕ್ಷೀಣಿಸಿದೆ. ಆದರೆ, ಮುಂಗಾರಿನ ಪರಿಣಾಮ ಅರಬ್ಬೀ ಸಮುದ್ರದಲ್ಲಿ ಉಬ್ಬರ-ಇಳಿತ ಹೆಚ್ಚಿದೆ. ಇದರಿಂದಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

Also Read  ಮದ್ಯ ಸಾಗಾಟದ ಲಾರಿ ಪಲ್ಟಿ- ರಸ್ತೆ ಮೇಲೆ ಬಿದ್ದಿದ್ದ ಮದ್ಯಕ್ಕಾಗಿ ಮುಗಿಬಿದ್ದ ಸಾರ್ವಜನಿಕರು

 

error: Content is protected !!
Scroll to Top