ರಾಜ್ಯದಲ್ಲಿಂದು 267 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆ

ಬೆಂಗಳೂರು, ಜೂ.3: ರಾಜ್ಯದಲ್ಲಿ ಒಂದೇ ದಿನ 267 ಮಂದಿಗೆ ಕೊರೋನ ಸೋಂಕು ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ 106, ಉಡುಪಿಯಲ್ಲಿ 62, ಬೆಂಗಳೂರು ನಗರದಲ್ಲಿ 20, ಮಂಡ್ಯದಲ್ಲಿ 13, ಯಾದಗಿರಿಯಲ್ಲಿ 9, ರಾಯಚೂರಿನಲ್ಲಿ 35, ಹಾಸನ 1, ದಾವಣಗೆರೆಯಲ್ಲಿ 3, ವಿಜಯಪುರದಲ್ಲಿ 6, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ 2, ಬಳ್ಳಾರಿ, ಧಾರವಾಡದಲ್ಲಿ ತಲಾ 1, ಕೋಲಾರದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 1 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 250 ಮಂದಿ ಹೊರರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ.

ರಾಜ್ಯದಲ್ಲಿ ಬುಧವಾರ 111 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 1,514 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ರಾಜ್ಯದಲ್ಲಿ 2,494 ಸಕ್ರಿಯ ಪ್ರಕರಣಗಳಿವೆ. ಒಟ್ಟು 55 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Also Read  9 ಹೈಕೋರ್ಟ್ ಜಡ್ಜ್ ಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು.!   ➤ ಕರ್ನಾಟಕಕ್ಕೆ ಇಬ್ಬರು ನ್ಯಾಯಧೀಶರ ನೇಮಕ                                 

ಕಲಬುರಗಿ 510 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿಕೆಯಾಗಿದೆ. ಉಡುಪಿ 472 ಸೋಂಕಿತರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರು ನಗರ ಮತ್ತು ಮಂಡ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಯಾದಗಿರಿ ಐದನೇ ಸ್ಥಾನದಲ್ಲಿದೆ.

error: Content is protected !!
Scroll to Top