ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆ ➤ ಸಮಿತಿ ರಚನೆಗೆ ತಹಸೀಲ್ದಾರ್ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ,ಮೇ.29:  ಗ್ರಾಮ ಪಂಚಾಯತ್ ಮಟ್ಟದಲ್ಲಿ ನೆರೆ ಮುಂಜಾಗ್ರತಾ ಸಮಿತಿ ರಚಿಸಿಕೊಂಡು ಮುಂದಿನ ಮಳೆಗಾಲದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಸಮರ್ಥವಾಗಿ ಎದುರಿಸಲು ಸನ್ನದ್ದರಾಗುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಸೂಚನೆ ನೀಡಿದ್ದಾರೆ. ಅವರು ಕಡಬ ತಾಲೂಕು ಮಟ್ಟದ ನೆರೆ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿ, ಮುಂಬರುವ ಮಳೆಗಾಲದಲ್ಲಿ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಸ್ಥಳೀಯವಾಗಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಅಗತ್ಯವಿರುವ ಸಾರ್ವಜನಿಕರನ್ನು ಗುರುತಿಸಿಕೊಂಡು ಅವರ ಮಾಹಿತಿಯನ್ನು ನೀಡಬೇಕು ಎಂದು ಸಭೆಯಲ್ಲಿದ್ದ ಎಲ್ಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಮತ್ತು ಗ್ರಾಮಕರಣಿಕರಿಗೆ ಸೂಚನೆ ನೀಡಿದರು.

 

ಈಗಾಗಲೇ ಕಡಬ ತಾಲೂಕಿನಲ್ಲಿ ಕುಮಾರಾಧಾರ ನದಿ ಪ್ರದೇಶ, ನೆಟ್ಟಣ ಹೊಳೆ, ಬಿಳಿನೆಲೆ ಭಾಗ್ಯ ಹೊಳೆ, ಗುಂಡ್ಯ ಹೊಳೆ, ಶಿರಾಡಿ, ಉದನೆ, ಇಚ್ಲಂಪಾಡಿ, ನೂಜಿಬಾಳ್ತಿಲ, ಹೊಸ್ಮಠ, ದೊಳ್ಪಾಡಿ ನೆರೆ ಸಂಭವನಿಯ ಪ್ರದೇಶಗಳೆಂದು, ನೆರೆ ಬಂದಾಗ ನೂಜಿಬಾಳ್ತಿಲ, ಆಲಂಕಾರು ಶಾಂತಿಮೊಗರು ನದಿ ತೀರದ ಪ್ರದೇಶ, ಕುಟ್ರುಪಾಡಿ ಎಸ್.ಸಿ. ಕಾಲನಿ, ಸುಬ್ರಹ್ಮಣ್ಯ ಕುಮಾರಧಾರ ನದಿ ಪ್ರದೇಶ, ಕುಲ್ಕುಂದ, ಶಿರಾಡಿ ಘಾಟಿ, ಗುಂಡ್ಯ ಹೊಳೆ ತಟ, ಪ್ರದೇಶಗಳನ್ನು ಮುಳುಗಡೆಯಾಗಬಹುದಾದ ಪ್ರದೇಶಗಳೆಂದು ಗುರುತಿಸಲಾಗಿದೆ. ಅಲ್ಲದೆ ಸುಬ್ರಹ್ಮಣ್ಯ ಅಭಯ ವಸತಿ ಗೃಹ, ಶಿರಾಡಿ ಹಿ.ಪ್ರಾ.ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವ ಬಗ್ಗೆಯೂ ಚರ್ಚೆ ನಡೆಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ನೆರೆ ನಿರ್ವಹಣೆ ಕುರಿತ ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಲಾಯಿತು.

Also Read  ಮೂರನೇ ಹಂತದ “ನಮ್ಮ ಮೆಟ್ರೋ”  ಕಾಮಗಾರಿಗೆ ಒಪ್ಪಿಗೆ ➤  ಸಿಎಂ ಬೊಮ್ಮಾಯಿ

 

ಸಭೆಯಲ್ಲಿ ಮೆಸ್ಕಾಂ, ಇಂಜಿನಿರಿಂಗ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಕರಣಿಕರು ಮಾತನಾಡಿ ನೆರೆ ಮುಂಜಾಗ್ರತೆಯ ಬಗ್ಗೆ ಸಲಹೆ ನೀಡಿದರು. ವೇದಿಕೆಯಲ್ಲಿ ಉಪತಹಸೀಲ್ದಾರ್ ನವ್ಯ, ಕಡಬ ಆರಕ್ಷಕ ಉಪನಿರೀಕ್ಷಕ ರುಕ್ಮ ನಾೈಕ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಮನೋಹರ್ ಸ್ವಾಗತಿಸಿ, ಕಂದಾಯ ನಿರೀಕ್ಷಕ ಅವಿನ್ ರಂಗತ್‍ಮಲೆ ವಂದಿಸಿದರು. ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಭರತ್ ಬಿ,ಎಂ. ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಕಾನಿಷ್ಕ,ಕಡಬ ಮೆಸ್ಕಾಂ ಎ.ಇ.ಇ ಸಜಿ ಕುಮಾರ್, ಅರಣ್ಯ ರಕ್ಷಕ ರವಿಚಂದ್ರ,ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮಕರಣಿಕರು, ಪಂಚಾಯತ್ ಕಾರ್ಯದರ್ಶಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

Also Read  ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ

 

 

 

 

error: Content is protected !!
Scroll to Top