ಕರಾವಳಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ➤ ಉಡುಪಿಯಲ್ಲಿ 15, ದ.ಕ 0

(ನ್ಯೂಸ್ ಕಡಬ) newskadaba.com ಉಡುಪಿ/ದಕ್ಷಿಣ ಕನ್ನಡ ,ಮೇ.29: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ದಕ್ಷಿಣ ಕನ್ನಡಕ್ಕೆ ಕೊರೋನಾ ಶುಭ ಶುಕ್ರವಾರವಾಗಿದೆ. ಆದ್ರೇ ಕೃಷ್ಣ ನಗರಿ ಉಡುಪಿ ಗೆ ಅಶುಭವಾಗೆದೆ. ಯಾಕಂದ್ರೇ ಇಂದು ಮಧ್ಯಾಣ್ನದ ವೇಳೆ ಗೆ ಉಡುಪಿಯಲ್ಲಿ 15 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.

 

 

 

ಇಂದಿನ ಎಲ್ಲಾ 15 ಪ್ರಕರಣಗಳೂ ಕೂಡಾ ಮಹಾರಾಷ್ಟ್ರದಿಂದ ಬಂದವರಿಂದಲೇ ವರದಿಯಾಗಿದೆ. ಇವರೆಲ್ಲರನ್ನೂ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಇವರಲ್ಲಿ ಇಬ್ಬರು ಹತ್ತು ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ, ಇಬ್ಬರು 60 ವರ್ಷಕ್ಕಿಂದ ಮೇಲ್ಪಟ್ಟ ವೃದ್ಧರೂ ಸೇರಿದ್ದಾರೆ. ಗ್ರೀನ್ ಜೋನ್ ನಲ್ಲಿದ್ದ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವವರಿಂದ ಸೋಂಕು ಪ್ರಕರಣ ಹೆಚ್ಚುತ್ತಿದೆ. ಕೇರಳ, ತೆಲಂಗಾಣ ಪ್ರಯಾಣಿಕರಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಆದರೆ ಮಹಾರಾಷ್ಟ್ರದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.

Also Read  ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

 

 

error: Content is protected !!
Scroll to Top