ದ.ಕ. ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೋನ ಸೋಂಕು ದೃಢ

ಮಂಗಳೂರು, ಮೇ 27: ದ.ಕ. ಜಿಲ್ಲೆಯಲ್ಲಿ ಇಂದು ಒಟ್ಟು 11 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಇದರಲ್ಲಿ 10 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಓರ್ವ ಮಾತ್ರ ಗುಜರಾತ್ ನಿಂದ ಬಂದವರಾಗಿದ್ದಾರೆ.

 

ಜಿಲ್ಲೆಯ ಸೋಂಕಿತರಲ್ಲಿ 3 ವರ್ಷದ ಮಗು ಸೇರಿ 35 ವರ್ಷದ ಗಂಡಸು, 36 ವರ್ಷದ ಹೆಂಗಸು , 46 ವರ್ಷದ ಗಂಡಸು , 11 ವರ್ಷದ ಹೆಣ್ಣು , 59 ವರ್ಷದ ಹೆಂಗಸು, 37 ವರ್ಷದ ಹೆಂಗಸು, 45 ವರ್ಷದ ಹೆಂಗಸು, 22 ವರ್ಷದ ಗಂಡು, 37 ವರ್ಷದ ಗಂಡಸು, 17 ವರ್ಷದ ಹೆಣ್ಣಿನಲ್ಲಿ ಸೋಂಕು ದೃಢಪಟ್ಟಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಶರವೂರು: ಶಾಲೆಯಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ

ಮಂಗಳವಾರ ಜಿಲ್ಲೆಯಲ್ಲಿ ಕೊಂಚ ನಿರಾಳವಾಗಿದ್ದು ಇಂದು ಮತ್ತೆ ಹನ್ನೊಂದು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಜನರಲ್ಲಿ ಆತಂಕ ಹೆಚ್ಚು ಮಾಡಿದೆ.

error: Content is protected !!
Scroll to Top