(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ25 : ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದಾಗಿ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು. ಇದರನ್ವಯ ಧಾರಾವಾಹಿ ಪ್ರೀಯರ ನೆಚ್ಚಿನ ಧಾರಾವಾಹಿಗಳ ಮೇಲೆ ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮ ಬಿರಿತ್ತು. ಯಾವುದೇ ಕೆಲ್ಸ ಇದ್ರು ಪಕ್ಕಕ್ಕಿಟ್ಟು, ಸೀರಿಯಲ್ ನೋಡಲು ಮುಗಿ ಬಿಳುತ್ತಿದ್ದ ನಾರಿಮಣಿಯರಿಗೆ ಕೊಂಚ ನಿರಾಸೆಯು ಆಗಿತ್ತು. ಆದ್ರೀಗಾ ಧಾರಾವಾಹಿ ಪ್ರೀಯರಿಗೆ ಒಂದು ಗುಡ್ ನ್ಯೂಸ್. ಹೌದು ಇಂದಿನಿಂದ ಸೀರಿಯಲ್ ಶೂಟಿಂಗ್ ಪ್ರಾರಂಭವಾಗುತ್ತಿದೆ.
ಸುಮಾರು ಎರಡು ತಿಂಗಳಿನಿಂದ ಸ್ತಭ್ಧವಾಗಿದ್ದ ಟಿವಿ ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪುನಾರಂಭವಾಗುತ್ತಿದೆ. ಜೂನ್ 1ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡುಗಳು ಕೂಡ ವಿವಿಧ ಟಿವಿ ಚಾನಲ್ ಗಳಲ್ಲಿ ಪ್ರಸಾರ ಕಾಣಲಿದೆ. ಇನ್ನು ಈ ವಿಚಾರಕ್ಕೆ ಸಂಬಂಧ ಪಟ್ಟಂತೆ,
ಮುಖ್ಯವಾಗಿ ಟೆಲಿವಿಷನ್ ಅಸೋಸಿಯೇಷನ್ ನ ಕೆಲವೊಂದು ನಿಯಮಗಳಿಗನುಸಾರವಾಗಿ ಸೀರಿಯಲ್ ಶೂಟಿಂಗ್ ನಡೆಸಲು ತಿಳಿಸಲಾಗಿದೆ. ಚಿತ್ರೀಕರಣದ ವೇಳೆ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ. ಚಿತ್ರೀಕರಣ ನಡೆಸುವ ಸ್ಥಳದಲ್ಲಿ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಒಂದೆಡೆ ಸೇರವಂತಿಲ,ಇನ್ನು ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವೆಂದು ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.