ಲಾಕ್‌ಡೌನ್ ಇದ್ದರೂ ರವಿವಾರ ಮದುವೆ ಸಮಾರಂಭಗಳಿಗೆ ಅನುಮತಿ

ಬೆಂಗಳೂರು, ಮೇ 21: ಪ್ರತಿ ರವಿವಾರ ಸಂಪೂರ್ಣ ಲಾಕ್‌ಡೌನ್ ಇದ್ದರೂ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ.

ಮದುವೆಯಲ್ಲಿ ಗರಿಷ್ಠ ಅತಿಥಿಗಳ ಸಂಖ್ಯೆ 50 ಇರಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಅನುಸರಿಸಿ ಸರಳ ವಿವಾಹ ನಡೆಸಬಹುದು. ಇದಲ್ಲದೆ, ರವಿವಾರಗಳೆಂದು ಅತ್ಯವಶ್ಯಕ ಚಟುವಟಿಕೆಗಳಿಗೂ ಅವಕಾಶ ನೀಡಬಹುದು ಎಂದೂ ಹೇಳಿದೆ. ಉಳಿದಂತೆ ರವಿವಾರ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಎಲ್ಲ ರೀತಿಯ ಚಟುವಟಿಕೆಗಳು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 144 ಸೆಕ್ಷನ್ ಅಡಿ ನಿಷೇಧಾಜ್ಞೆ ಇರುತ್ತದೆ ಎಂದು ಸರಕಾರ ಹೇಳಿದೆ.

Also Read  ಕೇವಲ 40 ಅಲ್ಲ 400 ಜನರಿಗೆ ಹನಿಟ್ರ್ಯಾಪ್: ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

error: Content is protected !!
Scroll to Top