ಜಿಲ್ಲೆಯಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಹುಟ್ಟೂರಿಗೆ ➤ ಜಾರ್ಖಂಡ್ ಗೆ ಹೊರಟಿತು ಮಂಗಳೂರಿನಿಂದ ವಿಶೇಷ ರೈಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.10. ಕೊರೊನಾದಿಂದಾಗಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಲುಕಿರುವ ಹೊರ ಊರಿನ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುವ ಕಾರ್ಯ ಆರಂಭಗೊಂಡಿದ್ದು, ಮಂಗಳೂರಿನಿಂದ ಜಾರ್ಖಂಡ್ ಗೆ 1000 ಪ್ರಯಾಣಿಕರನ್ನು ಹೊತ್ತ ಮೊದಲ ರೈಲು ಶನಿವಾರದಂದು ಹೊರಟಿದೆ.

ಲಾಕ್‌ಡೌನ್ ನಿಂದಾಗಿ ಬೇರೆ ಬೇರೆ ರಾಜ್ಯದ ವಲಸೆ ಕಾರ್ಮಿಕರು ಮಂಗಳೂರಿನಲ್ಲೇ ಬಾಕಿಯಾಗಿದ್ದು, ಕಾರ್ಮಿಕರಿಗೆ ಮರಳಿ ಊರಿಗೆ ತೆರಳಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ರೈಲಿನ ವ್ಯವಸ್ಥೆ ಮಾಡುತ್ತಿದೆ. ರೈಲಿನ ಮೂಲಕ ಪ್ರಯಾಣಿಸಲು ಸೇವಾ ಸಿಂಧು ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿರುವವರ ಸೀನಿಯಾರಿಟಿ ನೋಡಿ ಕಳುಹಿಸಿಕೊಡಲಾಗುತ್ತಿದೆ‌‌. ವಲಸೆ ಕಾರ್ಮಿಕರನ್ನು ಅವರಿರುವ ಸ್ಥಳದಿಂದ ಜಿಲ್ಲಾಡಳಿತವೇ ರೈಲು ನಿಲ್ದಾಣಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದ್ದು, ಜಿಲ್ಲಾಡಳಿತದ ಸೂಚನೆ ಇಲ್ಲದೆ ಯಾರೂ ರೈಲು ನಿಲ್ದಾಣಕ್ಕೆ ಬರಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿಯನ್ನು ಮಾಡಿದ್ದಾರೆ.

Also Read  ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ

error: Content is protected !!
Scroll to Top