ಮುಂಬೈ ಮಹಾಮಳೆ ►125 ವರ್ಷದ ಹಳೆಯ ಕಟ್ಟಡ ಕುಸಿದು 10 ಜನರ ಮೃತ್ಯು

(ನ್ಯೂಸ್ ಕಡಬ) newskadaba.com ಮುಂಬೈ, ಆ.31. ವಾಣಿಜ್ಯ ನಗರಿ ಮುಂಬಯಿನಲ್ಲಿ ಎಡೆಬಿಡದೇ ಸುರಿಯಿತ್ತಿರುವ ಮಳೆಯಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ನಿರಂತರ ಸುರಿಯುತ್ತಿರುವ ಮಹಾಮಳೆಯಿಂದಾಗಿ ಸುಮಾರು  125 ವರ್ಷದ ಹಳೆಯದಾದ  5 ಅಂತಸ್ತಿನ ಕಟ್ಟಡ ಕುಸಿದು 10 ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಮೌಲಾನಿ ಶೌಕತ್ ಅಲಿ ರೋಡ್‍ನ ಭೆಂಡಿ ಬಜಾರ್‍ನಲ್ಲಿ ಈ ಅವಘಡ ಸಂಭವಿಸಿದ್ದು, ಕಟ್ಟಡದ ಅವಶೇಷಗಳ ಅಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, 10 ಅಗ್ನಿಶಾಮಕ ವಾಹನಗಳು ಹಾಗೂ ಆಂಬುಲೆನ್ಸ್‍ಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಅವಘಡ ನಡೆದಿದ್ದು, ಕಟ್ಟಡದ ಕೆಳಗೆ ಸಿಲುಕಿದ್ದ 11 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸುಮಾರು 125 ವರ್ಷಗಳಷ್ಟು ಹಳೆಯದಾದ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಸುಮಾರು 10 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು. ಕಟ್ಟಡದ ಮೇಲಿನ ಎರಡು ಮಹಡಿಗಳನ್ನು ಅಕ್ರಮವಾಗಿ ಕಟ್ಟಲಾಗಿತ್ತು ಎಂದು ವರದಿಯಾಗಿದೆ. ಈ ಕಟ್ಟಡದಲ್ಲಿ ಪ್ಲೇಸ್ಕೂಲ್ ಕೂಡ ನಡೆಸಲಾಗುತ್ತಿತ್ತು. ಒಂದು ಗಂಟೆ ತಡವಾಗಿ ಈ ಅವಘಢ ಸಂಭವಿಸಿದ್ದರೂ ಸಾಕಷ್ಟು ಮಕ್ಕಳ ಜೀವಕ್ಕೆ ಅಪಾಯವಾಗುತ್ತಿತ್ತು.

error: Content is protected !!
Scroll to Top