ಕಡಬ: ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ➤ ದನ, ಮಾಂಸ ವಶ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬುಧವಾರ ಬೆಳ್ಳಂಬೆಳಗ್ಗೆ ಇಲ್ಲಿನ ಕಳಾರ ಎಂಬಲ್ಲಿನ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೋಲಿಸ್ ತಂಡ ಒಂದು ದನ, ಹಾಗೂ ಮಾಂಸ ವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.


ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ಜಾಬೀರ್ ಹಾಗೂ ಹಾಶಿರ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್.ಐ ರುಕ್ಮ ನಾಯ್ಕ್ ಅವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಭವಿತ್ ರೈ. ಶಿವರಾಜ್, ಕನಕರಾಜ್, ಮೋನಪ್ಪ, ಮಹೇಶ್, ರಮೇಶ ಗೃಹರಕ್ಷಕ ಸಿಬ್ಬಂದಿಗಳಾದ ಲೋಲಾಕ್ಷ, ಯೋಗೀಶ್ ಪಾಲ್ಗೊಂಡಿದ್ದರು.

Also Read  ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ ➤ ಇಂದಿನಿಂದಲೇ ನೂತನ ದರ ಜಾರಿ

error: Content is protected !!
Scroll to Top