ರಾಜ್ಯದಲ್ಲಿ ಮತ್ತೆ 18 ಮಂದಿಗೆ ಕೊರೋನ ಸೋಂಕು ದೃಢ: 400ರ ಗಟಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು, ಎ.20: ರಾಜ್ಯದಲ್ಲಿ ಕೊರೋನ ಆರ್ಭಟ ಹೆಚ್ಚಾಗಿದ್ದು, ರವಿವಾರ ಬೆಳಗ್ಗೆ 5ರಿಂದ ಸೋಮವಾರ ಸಂಜೆ 5ರವರೆಗೆ 18 ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ.

ವಿಜಯಪುರ 11, ಕಲಬುರಗಿ 5, ಬೀದರ್ ಹಾಗೂ ಗದಗ ತಲಾ ಒಂದರಂತೆ ಒಟ್ಟು 18 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೋನ ವೈರಸ್‌ಗೆ 16 ಮಂದಿ ಬಲಿಯಾಗಿದ್ದು, 112 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Scroll to Top