(ನ್ಯೂಸ್ ಕಡಬ) newskadaba.com ದುಬೈ, ಆ.31. ಅನ್ಸಾರುಲ್ ಇಸ್ಲಾಂ ಕಮಿಟಿ ದುಬೈ ಇದರ ಮಹಾ ಸಭೆಯು ರಿಯಾಝ್ ಕಾಣಿಯೂರು ಇವರ ಅಧ್ಯಕ್ಷತೆಯಲ್ಲಿ ದುಬೈ ಅಲ್ ಅಮಾನ್ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2017 – 2018 ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಾಫಿ ಮೂಸಾ ಬೆಳ್ಳಾರೆ, ಅಧ್ಯಕ್ಷರಾಗಿ ನಝೀರ್ ಬೆದ್ರಾಜೆ, ಕಾರ್ಯದರ್ಶಿಯಾಗಿ ಶರೀಫ್ ಮಾಲೆಂಗ್ರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶರೀಫ್ ಕಲ್ಪಡ, ಜೊತೆ ಕಾರ್ಯದರ್ಶಿ ಯಾಗಿ ಇಸ್ಮಾಯಿಲ್ ಮಾಲೆಂಗ್ರಿ, ಅಬ್ದುಲ್ ಖಾದರ್ ಮಾಲೆಂಗ್ರಿ, ಕೋಶಾಧಿಕಾರಿಯಾಗಿ ಇಸಾಕ್ ಬೆದ್ರಾಜೆ, ಲೆಕ್ಕ ಪರಿಶೋಧಕರಾಗಿ ಜಲೀಲ್ ಕಲ್ಪಡ, ಸಂಚಾಲಕರಾಗಿ ರಿಯಾಝ್ ಬಾಂತಾಯಿರವರನ್ನು ಆಯ್ಕೆ ಮಾಡಲಾಯಿತು. ಶಾಫಿ ಮಾಲೆಂಗ್ರಿ, ಅಶ್ರಫ್, ಅಝೀಝ್, ಲತೀಫ್, ಜುನೈದ್, ಮನ್ಸೂರ್, ಇಮ್ತಿಯಾಝ್, ಇಸಾಕ್ ಮಾಲೆಂಗ್ರಿ, ಸಿದ್ದೀಕ್ ಸುಳ್ಯ, ರಿಶಾದ್ ಉಪ್ಪಿನಂಗಡಿ, ಶಾಕಿರ್ ದೇಲಂಪಾಡಿ, ಸವಾದ್ ಸವಣೂರು ,ಶಹದಲಿ ಬೆಳಂದೂರು, ಜಾಫರ್ ಕೊಕ್ಕಡ ರವರನ್ನು ಒಳಗೊಂಡ ಕಾರ್ಯ ಕಾರಣಿ ಸಮಿತಿಯನ್ನು ರಚಿಸಲಾಯಿತು. ಜಲೀಲ್ ಕಲ್ಪಡ ಸ್ವಾಗತಿಸಿ, ಅಝೀಝ್ ಮಾಲೆಂಗ್ರಿ ವಂದಿಸಿದರು.